ರೈಲ್ವೇ ಆರ್ ಆರ್ ಬಿ ಎಎಲ್ ಪಿ ನೇಮಕಾತಿ ಅರ್ಜಿ ಸಲ್ಲಿಕೆ ಆರಂಭ; ಯಾರು ಅರ್ಜಿ ಸಲ್ಲಿಸಬಹುದು?
Photo Credit : rrbapply.gov.in
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ನಿಡಲಾದ ವಿವರಗಳನ್ನು ಸಂಪೂರ್ಣವಾಗಿ ಪರಿಶೀಲಿಸಲು ಸೂಚಿಸಲಾಗಿದೆ.
ರೈಲ್ವೇ ನೇಮಕಾತಿ ಮಂಡಳಿ (RRB) ತನ್ನ ಅಧಿಕೃತ ವೆಬ್ತಾಣದಲ್ಲಿ ಸಹಾಯಕ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ನೇಮಕಾತಿಯನ್ನು 11,127 ಹುದ್ದೆಗಳಿಗೆ ನಡೆಸಲಾಗುತ್ತಿದೆ. ರೈಲ್ವೇ ನೇಮಕಾತಿ ಮಂಡಳಿಯ ಹುದ್ದೆಗಳಿಗೆ 2026 ಮೇ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅಭ್ಯರ್ಥಿಗಳು 2026 ಜೂನ್ 14ರೊಳಗೆ ಅರ್ಜಿ ಸಲ್ಲಿಸಬಹುದು. ಈ ಮುಂದಿನ ಲಿಂಕ್ನಲ್ಲಿ ಅರ್ಜಿ ಸಲ್ಲಿಸಬಹುದು: https://www.rrbapply.gov.in/#/auth/home
ಅರ್ಜಿ ಸಲ್ಲಿಕೆಗೆ ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು ಮತ್ತು ಗರಿಷ್ಠ ವಯಸ್ಸಿನ ಮಿತಿ 2026 ಜುಲೈ 01 ರಂತೆ 30 ವರ್ಷಗಳು ಆಗಿರುತ್ತವೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ನಿಡಲಾದ ವಿವರಗಳನ್ನು ಸಂಪೂರ್ಣವಾಗಿ ಪರಿಶೀಲಿಸಲು ಸೂಚಿಸಲಾಗಿದೆ.
📌 ಪ್ರಮುಖ ದಿನಾಂಕಗಳು
• ಅಧಿಕೃತ ಸೂಚನೆ: 13 ಮೇ 2026
• ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 15 ಮೇ 2026
• ಆನ್ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 14 ಜೂನ್ 2026
• ಶುಲ್ಕ ಪಾವತಿಗೆ ಕೊನೆಯ ದಿನಾಂಕ: 16 ಜೂನ್ 2026
• ತಿದ್ದುಪಡಿ ದಿನಾಂಕ: 17 – 26 ಜೂನ್ 2026
• ಪರೀಕ್ಷೆ ದಿನಾಂಕ: ಮತ್ತೆ ಸೂಚಿಸಲಾಗುವುದು
• ಅಡ್ಮಿಟ್ ಕಾರ್ಡ್: ಪರೀಕ್ಷೆಗೆ 04 ದಿನಗಳ ಮೊದಲು
• ಫಲಿತಾಂಶ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು
• ಮಾಹಿತಿಗಳಿಗೆ ಅಭ್ಯರ್ಥಿಗಳು RRB ALP ಅಧಿಕೃತ ವೆಬ್ತಾಣವನ್ನು ಪರಿಶೀಲಿಸಬಹುದು.
📌 ಅರ್ಜಿ ಶುಲ್ಕ
ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ: 500 ರೂ.
ಎಸ್ಸಿ, ಎಸ್ಟಿ, ವಿಕಲಚೇತನ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು: 250 ರೂ.
ಪಾವತಿ ವಿಧಾನ: ಆನ್ಲೈನ್ ಮೂಲಕ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಮೊಬೈಲ್ ವ್ಯಾಲೆಟ್ ಇತ್ಯಾದಿ.
📌 ಒಟ್ಟು ಹುದ್ದೆಗಳು
11,127
📌 ಹುದ್ದೆಯ ಹೆಸರು ಮತ್ತು ಅರ್ಹತೆ
ಸಹಾಯಕ ಲೋಕೋ ಪೈಲಟ್ (ALP)
• ಅಭ್ಯರ್ಥಿಗಳು ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಪ್ರಮಾಣಪತ್ರದೊಂದಿಗೆ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ/ಪದವಿ ಪಡೆದಿರಬೇಕು.
• ವಲಯವಾರು ಅರ್ಹತೆಗೆ ಅಧಿಸೂಚನೆಯನ್ನು ಗಮನಿಸಿ.