ಭಾರತೀಯ ರೈಲ್ವೆ ಇಲಾಖೆಯಲ್ಲಿ 3,993 ಹುದ್ದೆಗಳ ನೇಮಕಾತಿ; ಯಾರು ಅರ್ಜಿ ಸಲ್ಲಿಸಬಹುದು?

Update: 2026-08-15 20:56 IST

Photo Credit : PTI 

ಇಂಜಿನಿಯರಿಂಗ್ ಪದವೀಧರರಿಗಾಗಿ ರೈಲ್ವೆಯಲ್ಲಿ ನೇಮಕಾತಿ ನಡೆಯುತ್ತಿದೆ. B.E./B.Tech ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು.

ರೈಲ್ವೆ ನೇಮಕಾತಿ ಮಂಡಳಿ (RRB) ಬರೋಬ್ಬರಿ 3,993 ಜೂನಿಯರ್ ಇಂಜಿನಿಯರ್ (JE) ಹಾಗೂ ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS) ಹುದ್ದೆಗಳನ್ನು ಭರ್ತಿ ಮಾಡಲು ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: https://www.rrbapply.gov.in/#/auth/landing

ಹುದ್ದೆಯ ವಿವರಗಳು

ಸಂಸ್ಥೆಯ ಹೆಸರು: ರೈಲ್ವೆ ನೇಮಕಾತಿ ಮಂಡಳಿ

ಹುದ್ದೆಯ ಹೆಸರು: ಜೂನಿಯರ್ ಎಂಜಿನಿಯರ್ (JE), ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS)

ಖಾಲಿ ಹುದ್ದೆಗಳು: 3,993

ಉದ್ಯೋಗ ಸ್ಥಳ: ಅಖಿಲ ಭಾರತ

ವೇತನ: ತಿಂಗಳಿಗೆ 35,400 ರೂ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 14 ಆಗಸ್ಟ್ 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13 ಸೆಪ್ಟೆಂಬರ್ 2026

ಶುಲ್ಕ ಪಾವತಿಸಲು ಕೊನೆಯ ದಿನಾಂಕ: 15 ಸೆಪ್ಟೆಂಬರ್ 2026

ಶೈಕ್ಷಣಿಕ ಅರ್ಹತೆ

* ಅಭ್ಯರ್ಥಿಗಳು ಸರಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಡಿಪ್ಲೊಮಾ ಅಥವಾ B.E./B.Tech ಪೂರ್ಣಗೊಳಿಸಿರಬೇಕು.

* ಭಾರತೀಯ ನಾಗರಿಕರು, ಜೊತೆಗೆ ನೇಪಾಳ, ಭೂತಾನ್‌ನ ಕೆಲವು ವರ್ಗದವರು ಮತ್ತು ನಿರ್ದಿಷ್ಟ ದೇಶಗಳ ಭಾರತೀಯ ಮೂಲದ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದು.

* ಅರ್ಹತೆಯ ವಿವರಗಳನ್ನು ಅಧಿಸೂಚನೆಯಲ್ಲಿ ನಿಖರವಾಗಿ ಗಮನಿಸಿಕೊಳ್ಳಬೇಕು.

ವಯೋಮಿತಿ

ರೈಲ್ವೆ ನೇಮಕಾತಿ ಮಂಡಳಿಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ 33 ವರ್ಷ ವಯಸ್ಸಿನವರಾಗಿರಬೇಕು.

ವಯೋಮಿತಿ ಸಡಿಲಿಕೆ

OBC ಅಭ್ಯರ್ಥಿಗಳಿಗೆ: 3 ವರ್ಷ

SC/ST ಅಭ್ಯರ್ಥಿಗಳಿಗೆ: 5 ವರ್ಷ

ಅರ್ಜಿ ಶುಲ್ಕ ವಿವರ

* ಸಾಮಾನ್ಯ/ಇತರೆ ಅಭ್ಯರ್ಥಿಗಳಿಗೆ: 500 ರೂ. (ಮೊದಲ ಹಂತದ CBT ಪರೀಕ್ಷೆಗೆ ಹಾಜರಾದ ನಂತರ ಬ್ಯಾಂಕ್ ಶುಲ್ಕ ಕಳೆದು 400 ರೂ. ಮರುಪಾವತಿಸಲಾಗುತ್ತದೆ).

* SC, ST, ಮಾಜಿ ಸೈನಿಕರು, PwBD, ಮಹಿಳೆಯರು, ಟ್ರಾನ್ಸ್‌ಜೆಂಡರ್ ಹಾಗೂ EBC ಅಭ್ಯರ್ಥಿಗಳಿಗೆ: 250 ರೂ. (ಪರೀಕ್ಷೆಗೆ ಹಾಜರಾದ ನಂತರ ಸಂಪೂರ್ಣ ಶುಲ್ಕ ಮರುಪಾವತಿಯಾಗಲಿದೆ).

ಆಯ್ಕೆ ಪ್ರಕ್ರಿಯೆ

* ಮೊದಲ ಹಂತದ CBT (ಕಂಪ್ಯೂಟರ್ ಆಧಾರಿತ ಪರೀಕ್ಷೆ), ಎರಡನೇ ಹಂತದ CBT

* ನೆಗೆಟಿವ್ ಮಾರ್ಕಿಂಗ್ ಇರುತ್ತದೆ. ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಮೀಸಲಾತಿ ನಿಯಮವೂ ಅನ್ವಯಿಸುತ್ತದೆ.

* ದಾಖಲೆ ಪರಿಶೀಲನೆ

* ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಸುವುದು ಹೇಗೆ?

* ಮೊದಲು ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್ (https://www.rrbapply.gov.in/#/auth/landing) ಗೆ ಭೇಟಿ ನೀಡಿ.

* RRB ಜೂನಿಯರ್ ಇಂಜಿನಿಯರ್ ನೇಮಕಾತಿ ಅಧಿಸೂಚನೆ 2026 ಅನ್ನು ಸರಿಯಾಗಿ ಓದಿ.

* ಸಂವಹನಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ ನೋಂದಾಯಿಸಿಕೊಳ್ಳಿ.

* ಅಗತ್ಯವಿರುವ ಶೈಕ್ಷಣಿಕ ದಾಖಲೆಗಳು, ಐಡಿ ಪ್ರೂಫ್ ಹಾಗೂ ಇತ್ತೀಚಿನ ಛಾಯಾಚಿತ್ರ/ಸಹಿಯನ್ನು ಅಪ್‌ಲೋಡ್ ಮಾಡಿ.

* ನಿಮ್ಮ ವರ್ಗಕ್ಕೆ ಅನುಗುಣವಾಗಿ ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.

* ಕೊನೆಯಲ್ಲಿ ‘Submit’ ಬಟನ್ ಕ್ಲಿಕ್ ಮಾಡಿ ಹಾಗೂ ಭವಿಷ್ಯದ ಉಲ್ಲೇಖಕ್ಕಾಗಿ ಅಪ್ಲಿಕೇಶನ್ ಪ್ರಿಂಟ್‌ಔಟ್ ತೆಗೆದಿಟ್ಟುಕೊಳ್ಳಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News