ಜಿಬೌಟಿ : ವಲಸಿಗರ ದೋಣಿ ಮುಳುಗಿ 16 ಮಂದಿ ಮೃತ್ಯು

Update: 2024-04-23 16:33 GMT

 ಸಾಂದರ್ಭಿಕ ಚಿತ್ರ

ನೈರೋಬಿ: ಪೂರ್ವ ಆಫ್ರಿಕಾದ ಜಿಬೌಟಿ ದೇಶದ ಕಡಲ ತೀರದ ಬಳಿ ವಲಸಿಗರು ಪ್ರಯಾಣಿಸುತ್ತಿದ್ದ ದೋಣಿಯೊಂದು ಮುಳುಗಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದು ಇತರ 28 ಮಂದಿ ನಾಪತ್ತೆಯಾಗಿರುವುದಾಗಿ ವಲಸಿಗರಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಏಜೆನ್ಸಿ (ಐಒಎಂ) ಮಂಗಳವಾರ ವರದಿ ಮಾಡಿದೆ.

ದೋಣಿಯಲ್ಲಿ ಮಕ್ಕಳ ಸಹಿತ 77 ವಲಸಿಗರಿದ್ದರು. ಜಿಬೌಟಿ ಕಡಲ ತೀರದ ಬಳಿ ದೋಣಿ ಮುಳುಗಿದ್ದು ಇದುವರೆಗೆ 16 ವಲಸಿಗರು ಮೃತಪಟ್ಟಿರುವುದು ದೃಢಪಟ್ಟಿದೆ. ಹಲವರನ್ನು ರಕ್ಷಣಾ ತಂಡದವರು ರಕ್ಷಿಸಿದ್ದು ಇನ್ನೂ 28 ಮಂದಿ ನಾಪತ್ತೆಯಾಗಿದ್ದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಐಒಎಂ ಹೇಳಿದೆ.

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News