×
Ad

ಕೀರ್ ಸ್ಟಾರ್ಮರ್ ಸರಕಾರಕ್ಕೆ ಆಘಾತ : ಬ್ರಿಟನ್ ರಕ್ಷಣಾ ಕಾರ್ಯದರ್ಶಿ ಜಾನ್ ಹೇಲಿ ರಾಜೀನಾಮೆ

Update: 2026-06-11 21:49 IST

ಬ್ರಿಟನ್ ರಕ್ಷಣಾ ಕಾರ್ಯದರ್ಶಿ ಜಾನ್ ಹೇಲಿ | Photo Credit : X \ @Euractiv 

ಲಂಡನ್,ಜೂ.11: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬ್ರಿಟನ್‌ನ ರಕ್ಷಣಾ ಕಾರ್ಯದರ್ಶಿ ಜಾನ್ ಹೇಲಿ ಅವರು ಗುರುವಾರ ರಾಜೀನಾಮೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಬೆದರಿಕೆ ಹೆಚ್ಚುತ್ತಿರುವ ಸಮಯದಲ್ಲಿ ಸೇನಾಶಕ್ತಿಗೆ ಸಾಕಷ್ಟು ವೆಚ್ಚ ಮಾಡಲು ನಿರಾಸಕ್ತಿ ತೋರುತ್ತಿರುವುದನ್ನು ಪ್ರತಿಭಟಿಸಿ ತಾನು ರಾಜೀನಾಮೆ ಸಲ್ಲಿಸಿರುವುದಾಗಿ ಅವರು ಹೇಳಿದ್ದಾರೆ

‘‘ಬೆದರಿಕೆ ಹೆಚ್ಚುತ್ತಿರುವ ಸಮಯದಲ್ಲಿ ದೇಶವನ್ನು ರಕ್ಷಿಸಲು ಅಗತ್ಯವಿರುವ ಸಂನ್ಮೂಲಗಳನ್ನು ಒದಗಿಸಲು ನೀವು ಅಸಮರ್ಥರಾಗಿದ್ದೀರಿ ಹಾಗೂ ವಿತ್ತ ಇಲಾಖೆಯು ಆಸಕ್ತಿ ಹೊಂದಿಲ್ಲ’’ ಹೇಲಿ ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಹೀಗಾಗಿ ರಕ್ಷಣಾ ಕಾರ್ಯದರ್ಶಿಯವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸದೆ ನನಗೆ ಬೇರೆ ಯಾವುದೇ ಆಯ್ಕೆ ಇಲ್ಲ’’ ಎಂದವರು ತಿಳಿಸಿದ್ದಾರೆ.

2024ರ ಜುಲೈನಲ್ಲಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಹೇಲಿ ಅವರು ರಕ್ಷಣಾ ಕಾರ್ಯದರ್ಶಿಯಾಗಿದ್ದಾರೆ. ಅತ್ಯಂತ ಸಮರ್ಥ ಹಾಗೂ ಕಟ್ಟುನಿಟ್ಟಿನ ಸಚಿವರೆಂದು ಪರಿಗಣಿಸಲ್ಪಟ್ಟಿದ್ದಾರೆ.

2027ರೊಳಗೆ ಬ್ರಿಟನ್‌ನ ರಕ್ಷಣಾ ವೆಚ್ಚವನ್ನು ಒಟ್ಟು ಆಂತರಿಕ ಉತ್ಪನ್ನದ ಶೇ.2.5ರಷ್ಟು ಹಾಗೂ 2034ರೊಳಗೆ ಶೇ.3ರಷ್ಟು ಹೆಚ್ಚಿಸಲಾಗುವುದೆಂದು ಸ್ಟಾರ್ಮರ್ ಭರವಸೆ ನೀಡಿದ್ದರು. ಆದರೆ ದೇಶದ ಮಿಲಿಟರಿ ಆವಶ್ಯಕತೆ ಅಷ್ಚು ಅನುದಾನ ಸಾಲದೆಂದು ರಕ್ಷಣಾ ವಲಯದ ಬಹುತೇಕ ಮಂದಿಯ ಅಭಿಪ್ರಾಯವಾಗಿದೆ.

ಪದತ್ಯಾಗ ಮಾಡುವಂತೆ ಆಡಳಿತಾರೂಢ ಲೇಬರ್ ಪಕ್ಷದ ನಾಯಕರಿಂದ ತೀವ್ರ ಒತ್ತಡವನ್ನೆದುರಿಸುತ್ತಿರುವ ಪ್ರಧಾನಿ ಕೀರ್‌ ಸ್ಟಾರ್ಮರ್ ಅವರಿಗೆ ಹೇಲಿ ರಾಜೀನಾಮೆ ಭಾರೀ ದೊಡ್ಡ ಹಿನ್ನಡೆಯಾಗಲಿದೆಂದು ಮಾಧ್ಯಮಗಳು ಬಣ್ಣಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News