ಭೂಕಂಪದ ಹಿನ್ನೆಲೆಯಲ್ಲಿ ಸುಂಕ ತಡೆಯುವಂತೆ ಟ್ರಂಪ್‍ಗೆ ಕೊಲಂಬಿಯಾ ಅಧ್ಯಕ್ಷ ಮನವಿ
Update: 2026-08-16 20:52 IST
ಅಬೆಲಾರ್ಡೊ ಡಿ ಲಾ ಎಸ್ಪ್ರಿಯೆಲ್ಲಾ | Photo Credit : AP
ಬೊಗೋಟಾ, ಆ.16: ಭೂಕಂಪದಿಂದ ನಲುಗಿರುವ ದಕ್ಷಿಣ ಅಮೆರಿಕದ ದೇಶವಾದ ಕೊಲಂಬಿಯಾಗೆ ತುಸು ಉಪಶಮನ ನೀಡುವ ನಿಟ್ಟಿನಲ್ಲಿ, ಪ್ರಸ್ತುತ ದೇಶದ ಉತ್ಪನ್ನಗಳ ಮೇಲೆ ವಿಧಿಸಲಾಗಿರುವ ಸುಂಕಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಕೊಲಂಬಿಯಾದ ನೂತನ ಅಧ್ಯಕ್ಷ ಅಬೆಲಾರ್ಡೊ ಡಿ ಲಾ ಎಸ್ಪ್ರಿಯೆಲ್ಲಾ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ಮನವಿ ಮಾಡಿದ್ದಾರೆ.
ಆಗಸ್ಟ್ 10ರಂದು ಸಂಭವಿಸಿದ 7.4 ತೀವ್ರತೆಯ ಭೂಕಂಪದಿಂದ ಉಂಟಾದ ಸಾವು-ನೋವುಗಳಿಗೆ ಸಂತಾಪ ಸೂಚಿಸಿದ ಟ್ರಂಪ್ ಅವರೊಂದಿಗೆ ಸುಮಾರು 10 ನಿಮಿಷಗಳ ಕಾಲ ಮಾತನಾಡಿದ್ದಾಗಿ ಎಸ್ಪ್ರಿಯೆಲ್ಲಾ ಹೇಳಿದ್ದಾರೆ.
ಕಾಫಿ ಮತ್ತು ತೈಲ ಸೇರಿದಂತೆ ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ, ಕೊಲಂಬಿಯಾದ ಉತ್ಪನ್ನಗಳ ಮೇಲಿನ ಅಮೆರಿಕದ ಸುಂಕವು ಜುಲೈ ಕೊನೆಯಲ್ಲಿ ಶೇಕಡಾ 10 ರಿಂದ ಶೇಕಡಾ 12.5 ಕ್ಕೆ ಏರಿಕೆಯಾಗಿತ್ತು.