ಅಮೆರಿಕದ ಮಿಚಿಗನ್‍ನಲ್ಲಿ ಶೂಟೌಟ್ | 6 ಜನರು ಮೃತ್ಯು
Update: 2026-08-16 11:34 IST
Photo Credit : AP
ನ್ಯೂಯಾರ್ಕ್, ಆ.15: ಮಿಚಿಗನ್‍ನಲ್ಲಿ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಐದು ಜನರು ಮೃತಪಟ್ಟಿದ್ದಾರೆ ಮತ್ತು ಶಂಕಿತ ವ್ಯಕ್ತಿಯೂ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಿಸ್ಸಾಕಿ ಕೌಂಟಿಯ ಮನೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಸಮೀಪದ ಮನೆಯಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಶಂಕಿತ ಆರೋಪಿ, 39 ವರ್ಷದ ಚಾದ್ ಹಿಕ್‍ಮನ್ ಪರಾರಿಯಾಗಿದ್ದು ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾಗ ಹಿಟ್‍ಲಾಕ್ ಸರೋವರದ ಬಳಿಯ ಅರಣ್ಯ ಪ್ರದೇಶದಲ್ಲಿ ಅಧಿಕಾರಿಗಳು ಹಿಕ್‍ಮನ್‍ನ ವಾಹನವನ್ನು ಪತ್ತೆಹಚ್ಚಿದರು. ವಾಹನದಲ್ಲಿ ಹಿಕ್‍ಮನ್ ಹಾಗೂ ಮತ್ತೊಬ್ಬ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.