ಹಾರ್ಮುಝ್ ನಮ್ಮ ನಿಯಂತ್ರಣದಲ್ಲಿದೆ: ಟ್ರಂಪ್
ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಮೇ 13: ನಾವು ಇರಾನ್ ಅನ್ನು ದೊಡ್ಡ ಮಟ್ಟದಲ್ಲಿ ನಿಯಂತ್ರಿಸುತ್ತಿದ್ದೇವೆ. ಹಾರ್ಮುಝ್ ಜಲಸಂಧಿಯೂ ಈಗ ಅಮೆರಿಕದ ನಿಯಂತ್ರಣದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.
‘ನಾವು ಒಂದೋ ಒಪ್ಪಂದ ಮಾಡಿಕೊಳ್ಳುತ್ತೇವೆ ಅಥವಾ ಅವರು ನಾಶವಾಗಲಿದ್ದಾರೆ. ಯಾವ ರೀತಿಯಲ್ಲಾದರೂ ಗೆಲುವು ನಮ್ಮದೇ ಆಗಲಿದೆ’ ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್ ಹೇಳಿಕೆಗೆ ಧ್ವನಿಗೂಡಿಸಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆಥ್, ‘ಅಮೆರಿಕದ ಬಳಿ ಸಾಕಷ್ಟು ಬಾಂಬ್ ಗಳು ಮತ್ತು ಕ್ಷಿಪಣಿಗಳಿವೆ. ಅಂತಿಮವಾಗಿ ನಾವು ಹಾರ್ಮುಝ್ ಜಲಸಂಧಿಯನ್ನು ಪೂರ್ಣವಾಗಿ ನಿಯಂತ್ರಣಕ್ಕೆ ಪಡೆಯುತ್ತೇವೆ. ಯಾಕೆಂದರೆ ನಮಗೆ ಅಲ್ಲಿ ತಡೆ ಎದುರಾಗುತ್ತಿಲ್ಲ’ ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್, ‘ಅವಮಾನ, ಬೆದರಿಕೆಗಳು ಮತ್ತು ಹಳೆಯ ಸೇಡು ತೀರಿಸಿಕೊಳ್ಳುವ ಉದ್ದೇಶವು ಶಾಂತಿಯನ್ನು ನಿರ್ಮಿಸಲು ಸಾಧ್ಯವಿಲ್ಲ’ ಎಂದು ಹೇಳಿದೆ.