×
Ad

ಮಧ್ಯಪ್ರಾಚ್ಯದಲ್ಲಿ ಮತ್ತೆ ಸಂಘರ್ಷ ತೀವ್ರ : ಇರಾನ್‌ನ ಕ್ವೆಶ್ಮ್ ದ್ವೀಪ, ಬಂದರ್ ಅಬ್ಬಾಸ್ ಮೇಲೆ ಅಮೆರಿಕಾದಿಂದ ದಾಳಿ

Update: 2026-07-14 10:10 IST

ಸಾಂದರ್ಭಿಕ ಚಿತ್ರ (X/@RT_India_news)

ವಾಷಿಂಗ್ಟನ್ : ಮಧ್ಯಪ್ರಾಚ್ಯದಲ್ಲಿ ಮತ್ತೆ ಸಂಘರ್ಷ ತೀವ್ರಗೊಂಡಿದ್ದು, ಇರಾನ್‌ ಮೇಲೆ ಅಮೆರಿಕ ದಾಳಿಯನ್ನು ಮುಂದುವರಿಸಿದೆ. ಕ್ವೆಶ್ಮ್ ದ್ವೀಪ, ಬುಶೆಹರ್ ಮತ್ತು ಬಂದರ್ ಅಬ್ಬಾಸ್‌ನಲ್ಲಿ ಸ್ಫೋಟಗಳ ಸಂಭವಿಸಿರುವ ಬಗ್ಗೆ ಇರಾನ್ ಮಾಧ್ಯಮಗಳು ಕೂಡ ವರದಿ ಮಾಡಿದೆ.

“ಇರಾನ್ ಮೇಲೆ ನಡೆದ ಇತ್ತೀಚಿನ ದಾಳಿಯು ಸುಮಾರು ಐದು ಗಂಟೆಗಳ ಕಾಲ ಮುಂದುವರಿದಿದೆ. ಬುಶೆಹರ್, ಚಾಹ್ ಬಹಾರ್, ಜಾಸ್ಕ್, ಕೊನಾರಕ್, ಅಬು ಮೂಸಾ ಮತ್ತು ಬಂದರ್ ಅಬ್ಬಾಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿನ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಯಶಸ್ವಿಯಾಗಿ ದಾಳಿ ನಡೆಸಲಾಗಿದೆ” ಎಂದು ಅಮೆರಿಕ ಪಡೆಗಳು ಪ್ರಕಟಣೆಯಲ್ಲಿ ತಿಳಿಸಿದೆ.

ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸುವ ಇರಾನ್‌ನ ಸಾಮರ್ಥ್ಯವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಅಮೆರಿಕದ ಪಡೆಗಳು ಇರಾನ್‌ನ ಕರಾವಳಿ ರಕ್ಷಣಾ ವ್ಯವಸ್ಥೆಗಳು, ಕ್ಷಿಪಣಿ ಮತ್ತು ಡ್ರೋನ್ ನೆಲೆಗಳು ಹಾಗೂ ನೌಕಾ ಸಾಮರ್ಥ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಅಮೆರಿಕ ತಿಳಿಸಿದೆ.

ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ 50,000ಕ್ಕೂ ಹೆಚ್ಚು ಅಮೆರಿಕದ ಸೈನಿಕರು ನಿಯೋಜಿತರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News