Photo Credit: AP

ಇಸ್ಲಮಾಬಾದ್: ಪವಿತ್ರ ನಗರವಾದ ಮಕ್ಕಾ ಬಳಿ ನಡೆದ ಡ್ರೋನ್ ದಾಳಿಯ ಯತ್ನದ ನಂತರ, ಸೌದಿ ಅರೇಬಿಯಾ ಮತ್ತು ತುರ್ಕಿಯೆಯೊಂದಿಗೆ ಮಾಡಿಕೊಂಡಿರುವ `ಮಕ್ಕಾ ಜಂಟಿ ರಕ್ಷಣಾ ಒಪ್ಪಂದ'ದ ಅಡಿಯಲ್ಲಿ ತನ್ನ ಬದ್ಧತೆಗಳನ್ನು ಪೂರೈಸಲು ಇಸ್ಲಾಮಾಬಾದ್ ಸಿದ್ಧವಾಗಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜ ಆಸಿಫ್ ತಿಳಿಸಿದ್ದಾರೆ.

ಮಕ್ಕಾ ಒಪ್ಪಂದವು ನಮಗೆ ಅನ್ವಯಿಸುತ್ತದೆ ಮತ್ತು ನಾವು ನಮ್ಮ ಕರ್ತವ್ಯವನ್ನು ಪೂರೈಸುತ್ತೇವೆ. ಒಪ್ಪಂದವನ್ನು ಹೊರತುಪಡಿಸಿಯೂ ಪವಿತ್ರ ಸ್ಥಳಗಳನ್ನು ರಕ್ಷಿಸುವ ಕರ್ತವ್ಯ ಪಾಕಿಸ್ತಾನಕ್ಕಿದೆ. ಒಂದು ವೇಳೆ ಮಕ್ಕಾದ ಮೇಲೆ ದಾಳಿಯಾದರೆ, ಅದನ್ನು ರಕ್ಷಿಸಲು ಯಾವುದೇ ಒಪ್ಪಂದದ ಅಗತ್ಯವಿಲ್ಲ. ಇತ್ತೀಚಿನ ಹೌದಿ ದಾಳಿಗಳ ಕುರಿತು ಸೌದಿ ಅರೇಬಿಯಾದ ಕಳವಳಗಳನ್ನು ಪಾಕಿಸ್ತಾನವು ಇರಾನ್‍ಗೆ ತಲುಪಿಸಿದೆ ಎಂದು ಆಸಿಫ್ ಹೇಳಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor