Saudi Arabia | ರಿಯಾದ್ ನತ್ತ ಕ್ಷಿಪಣಿ ಉಡಾಯಿಸಿದ ಹೌತಿಗಳು; ತಡೆದು ನಾಶಪಡಿಸಿದ ಸೌದಿ ಮೈತ್ರಿಕೂಟ
ಸಾಂದರ್ಭಿಕ ಚಿತ್ರ
ರಿಯಾದ್: ಸೌದಿ ಅರೇಬಿಯದ ರಾಜಧಾನಿ ರಿಯಾದ್ ನತ್ತ ಹೌತಿಗಳು ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸೌದಿ ನೇತೃತ್ವದ ಮೈತ್ರಿಕೂಟ ತಡೆದು ನಾಶಪಡಿಸಿದೆ ಎಂದು ಮೈತ್ರಿಕೂಟದ ವಕ್ತಾರ ಕರ್ನಲ್ ತುರ್ಕಿ ಅಲ್-ಮಲ್ಕಿ ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
ಯೆಮನ್ ನಲ್ಲಿ ಹೋರಾಡುತ್ತಿರುವ ಸೌದಿ ನೇತೃತ್ವದ ಮೈತ್ರಿಕೂಟದ ವಕ್ತಾರ ಅಲ್-ಮಲ್ಕಿ ಅವರು 'ಎಕ್ಸ್'ನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ.
ಇದಕ್ಕೂ ಮೊದಲು, ರಿಯಾದ್ ನಲ್ಲಿ ಸಂಭವನೀಯ ಅಪಾಯವಿರುವ ಬಗ್ಗೆ ಪ್ರಾಧಿಕಾರ ಎಚ್ಚರಿಕೆ ನೀಡಿತ್ತು. ನಿವಾಸಿಗಳು ತಕ್ಷಣವೇ ಹತ್ತಿರದ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಹಾಗೂ ಅಪಾಯ ಸಂಪೂರ್ಣವಾಗಿ ದೂರವಾಗುವವರೆಗೂ ಮನೆ ಅಥವಾ ಕಟ್ಟಡದಿಂದ ಹೊರಬರಬಾರದು ಎಂದು ಸೂಚಿಸಿತ್ತು.