ಇರಾನಿನ 40 ನಾವಿಕರ ರಕ್ಷಣೆಗೆ ನೆರವಾದ ಶ್ರೀಲಂಕಾ
19 ವಾಣಿಜ್ಯ ಹಡಗುಗಳಿಂದ ನಾವಿಕರ ರಕ್ಷಣೆ; ಇರಾನ್ ಗೆ ಮರಳಲು ವ್ಯವಸ್ಥೆ
Photo credit : iranintl
ಕೊಲಂಬೊ: ಶ್ರೀಲಂಕಾದ ಕರಾವಳಿಯಲ್ಲಿದ್ದ 19 ವಾಣಿಜ್ಯ ಹಡಗುಗಳಿಂದ 40 ಇರಾನಿನ ನಾವಿಕರನ್ನು ರಕ್ಷಿಸಿ, ಅವರು ತಾಯ್ನಾಡಿಗೆ ಮರಳಲು ಶ್ರೀಲಂಕಾ ಸರಕಾರ ನೆರವು ನೀಡಿದೆ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಇರಾನ್ ನ ರಾಯಭಾರ ಕಚೇರಿಯು ರಾಜತಾಂತ್ರಿಕ ಮಾರ್ಗಗಳ ಮೂಲಕ ರಕ್ಷಣಾ ಕಾರ್ಯಾಚರಣೆಗೆ ಮನವಿ ಮಾಡಿತ್ತು ಎಂದು ಸಚಿವಾಲಯದ ವಕ್ತಾರ ತುಷಾರ ರೊಡ್ರಿಗೋ ತಿಳಿಸಿದ್ದಾರೆ.
ವೈದ್ಯಕೀಯ ತುರ್ತು ಪರಿಸ್ಥಿತಿಗಳಿಂದ ಬಳಲುತ್ತಿದ್ದ ನಾವಿಕರನ್ನು ಕೊಲಂಬೊದಿಂದ ಸುಮಾರು 126 ಕಿ.ಮೀ. (78 ಮೈಲು) ದೂರದಲ್ಲಿರುವ ಗ್ಯಾಲೆ ಬಂದರಿಗೆ ಕರೆತರಲಾಯಿತು. ಅಲ್ಲಿ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಿದ ಬಳಿಕ, ಸೋಮವಾರ ಬೆಳಿಗ್ಗೆ ಇರಾನ್ ಗೆ ಮರಳಲು ವ್ಯವಸ್ಥೆ ಮಾಡಲಾಯಿತು.
ದ್ವಿತೀಯ ನಿರ್ಬಂಧಗಳ ಕುರಿತು ಕಳವಳ ವ್ಯಕ್ತಪಡಿಸಿದ್ದ ಶ್ರೀಲಂಕಾ, ಈ ತಿಂಗಳ ಆರಂಭದಲ್ಲಿ ಹಡಗುಗಳಿಗೆ ನೆರವು ನೀಡುವ ಯಾವುದೇ ತಕ್ಷಣದ ಯೋಜನೆಗಳಿಲ್ಲ ಎಂದು ಹೇಳಿತ್ತು.