ಡೊನಾಲ್ಡ್ ಟ್ರಂಪ್‍ | Photo Credit : PTI

ವಾಶಿಂಗ್ಟನ್: ರಶ್ಯದಿಂದ ಕಚ್ಚಾ ತೈಲ ಮತ್ತು ಅನಿಲವನ್ನು ಖರೀದಿಸುವ ಕಾರಣಕ್ಕೆ ಭಾರತ ಸೇರಿದಂತೆ ವಿವಿಧ ದೇಶಗಳ ಮೇಲೆ ಶೇಕಡಾ 100 ರಷ್ಟು ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ವ್ಯಾಪಕ ಅಧಿಕಾರ ನೀಡುವ ಮಸೂದೆಯ ಬಗ್ಗೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಸಂಸತ್ತು) ಪ್ರಮುಖ ಕಾರ್ಯವಿಧಾನದ ಮತದಾನವನ್ನು ಪೂರ್ಣಗೊಳಿಸಿದೆ. ಭಾರತದ ಜೊತೆಗೆ ಚೀನಾ ಕೂಡ ಈ ಪಟ್ಟಿಯಲ್ಲಿದೆ ಎಂದು ಪಿಟಿಐ ವರದಿ ಮಾಡಿದೆ.

ಮಸೂದೆಯ ಬಗ್ಗೆ ಅಂತಿಮ ಮತದಾನ ಬುಧವಾರ ರಾತ್ರಿ ನಡೆಯುವ ನಿರೀಕ್ಷೆಯಿದೆ. ಸಂಸತ್ತಿನಲ್ಲಿ ಈ ಮಸೂದೆ ಅಂಗೀಕಾರಗೊಂಡರೆ, ಅದು ಅಧ್ಯಕ್ಷರ ಒಪ್ಪಿಗೆಗೆ ತಲುಪುವ ಮುನ್ನ ಸಂಸತ್ತಿನ ಅಂತಿಮ ಅಡೆತಡೆಯನ್ನು ದಾಟಿದಂತಾಗುತ್ತದೆ.

`ರಶ್ಯ ಮತ್ತು ಇರಾನ್ ನಿರ್ಬಂಧಗಳ ಕಾಯ್ದೆ 2026' ಮಂಗಳವಾರ ಸಂಜೆ ಸಂಸತ್ತಿನಲ್ಲಿ ಪ್ರಮುಖ ಕಾರ್ಯವಿಧಾನದ ಅಡೆತಡೆಯನ್ನು ದಾಟಿದೆ. ಇಬ್ಬರು ಡೆಮಾಕ್ರಟನ್ನರು ರಿಪಬ್ಲಿಕನ್ನರೊಂದಿಗೆ ಸೇರಿ ಈ ಕ್ರಮವನ್ನು ಬೆಂಬಲಿಸಿದ್ದರಿಂದ, ಮಸೂದೆಯ ಪರವಾಗಿ 214:211 ಮತಗಳು ಬಿದ್ದವು.

̤̤̤̤̤̤̤̤̤̤̤̤̤

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor