ಕಲಬುರಗಿ: ವಿಶೇಷ ತೀವ್ರ ಮತದಾರರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಡಿ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದ್ದು, ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,26,482 ಮತದಾರರು ಪಟ್ಟಿಯಲ್ಲಿ ದಾಖಲಾಗಿದ್ದಾರೆ ಎಂದು ತಹಶೀಲ್ದಾರ್ ಕೆ.ಆನಂದ್ ಶೀಲ್ ತಿಳಿಸಿದ್ದಾರೆ.

ಕಲಬುರಗಿ ಗ್ರಾಮೀಣ ಕ್ಷೇತ್ರದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 2,21,513 ಮತದಾರರ ಹೆಸರುಗಳು ದಾಖಲಾಗಿದ್ದವು. ಇವರಲ್ಲಿ 1,14,753 ಪುರುಷರು ಹಾಗೂ 1,06,739 ಮಹಿಳಾ ಮತದಾರರು ಇದ್ದರು.

ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 2,26,482 ಮತದಾರರು ದಾಖಲಾಗಿದ್ದು, ಇವರಲ್ಲಿ 1,17,100 ಪುರುಷರು ಹಾಗೂ 1,09,363 ಮಹಿಳಾ ಮತದಾರರು ಇದ್ದಾರೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.

ಇದೇ ವೇಳೆ, ಎಎಸ್‌ಡಿಡಿಒ ವರ್ಗದಲ್ಲಿ ಒಟ್ಟು 53,365 ಮತದಾರರ ಹೆಸರುಗಳನ್ನು ಗುರುತಿಸಲಾಗಿದೆ. ಇವರಲ್ಲಿ 7,308 ಮಂದಿ ಮೃತಪಟ್ಟವರು, 4,183 ಮಂದಿ ಗೈರುಹಾಜರಾದವರು, 37,992 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 3,227 ಮಂದಿ ಈಗಾಗಲೇ ಬೇರೆಡೆ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡವರು ಹಾಗೂ 655 ಮಂದಿ ಇತರೆ ವರ್ಗಕ್ಕೆ ಸೇರಿದವರಾಗಿದ್ದಾರೆ.

18 ವರ್ಷ ವಯಸ್ಸು ಪೂರ್ಣಗೊಳಿಸಿದ ಹೊಸ ಮತದಾರರಾಗಿ ಫಾರ್ಮ್-6ರ ಮೂಲಕ 3,144 ಮಂದಿಯನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 4,237 ಮತದಾರರು, 3,030 ಅಂಗವಿಕಲ ಮತದಾರರು ಹಾಗೂ 186 ಸೇವಾ ಮತದಾರರು ಇದ್ದಾರೆ ಎಂದು ತಹಶೀಲ್ದಾರ್ ಕೆ. ಆನಂದ್ ಶೀಲ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor