ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಮೊದಲ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿಗೆ 1,529 ಮತಗಳ ಮುನ್ನಡೆ
ಶಶೀಲ್ ನಮೋಶಿ
ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆಯ ಮೊದಲ ಸುತ್ತು ಪೂರ್ಣಗೊಂಡಿದ್ದು, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶಶೀಲ್ ಜಿ.ನಮೋಶಿ ಅವರು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರಿಗಿಂತ 1,529 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು 34,784 ಮತದಾರರಿದ್ದು, ಈ ಪೈಕಿ 30,250 ಮಂದಿ ಮತ ಚಲಾಯಿಸಿದ್ದರು. ಮೊದಲ ಸುತ್ತಿನಲ್ಲಿ ಒಟ್ಟು 14,001 ಮತಗಳನ್ನು ಎಣಿಕೆ ಮಾಡಲಾಗಿದ್ದು, 13,183 ಮತಗಳು ಸಿಂಧುವಾಗಿವೆ. ಉಳಿದ 818 ಮತಗಳು ತಿರಸ್ಕೃತಗೊಂಡಿವೆ.
ಮೊದಲ ಸುತ್ತಿನ ಅಭ್ಯರ್ಥಿವಾರು ಮತಗಳ ವಿವರ :
► ಶಶೀಲ್ ಜಿ. ನಮೋಶಿ (ಬಿಜೆಪಿ): 7,243
► ಶರಣಪ್ಪ ಮಟ್ಟೂರು (ಕಾಂಗ್ರೆಸ್): 5,714
► ರಾಜಕುಮಾರ ಕೆ. ಕಲಬುರಗಿ (ಪಕ್ಷೇತರ): 75
► ರಾಜು ದೇವಪ್ಪ ಸೊನ್ನ (ಪಕ್ಷೇತರ): 55
► ಕವಿರಾಜ ನಾಗಣ್ಣ ಮೋತಕಪಲ್ಲಿ (ಪಕ್ಷೇತರ): 34
► ಶಂಕರೆಡ್ಡಿ ಪಾಟೀಲ (ಜೆಡಿಎಸ್–ಸಂಯುಕ್ತ): 21
► ಸಾಯಬಣ್ಣ ಜಮಾದಾರ (ಆಮ್ ಆದ್ಮಿ ಪಕ್ಷ): 18
► ಶರಣು ಪಿ. ಸುಗೂರು (ಪಕ್ಷೇತರ): 05
► ಶಿವಶಂಕರ ಅಣ್ಣಪ್ಪ ತರನಳ್ಳಿ (ಪಕ್ಷೇತರ): 05
► ಡಾ. ಸುರೇಶ ದಾವೀದಪ್ಪ (ಪಕ್ಷೇತರ): 05
► ಶಶಿಧರ ಬಸವರಾಜ (ಪಕ್ಷೇತರ): 04
►ಮಹಬೂಬ್ ಮೊಹಮ್ಮದ್ ಖಾಜಾ ಹುಸೇನ್ ವಂಟೇಲಿ (ಪಕ್ಷೇತರ): 03
► ಟಿ.ಕೆ. ದಾಸರ (ಪಕ್ಷೇತರ): 01
ಮೊದಲ ಸುತ್ತಿನಲ್ಲೇ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಗಮನಾರ್ಹ ಮುನ್ನಡೆ ಸಾಧಿಸಿದ್ದು, ಚುನಾವಣಾ ಕಣದ ಕುತೂಹಲ ಹೆಚ್ಚಿಸಿದೆ. ಎರಡನೇ ಸುತ್ತಿನ ಮತ ಎಣಿಕೆ ಆರಂಭವಾಗಿದೆ.