ಶಾಸಕ ಬಿ.ಆರ್.ಪಾಟೀಲ್ ಹೇಳಿಕೆ ಖಂಡಿಸಿ ಆಳಂದದಲ್ಲಿ ಬಿಜೆಪಿ ಪ್ರತಿಭಟನೆ
ಆಳಂದ : ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರ ಕುರಿತು ಶಾಸಕ ಬಿ.ಆರ್.ಪಾಟೀಲ್ ನೀಡಿದ ಹೇಳಿಕೆಯನ್ನು ಖಂಡಿಸಿ ಬಿಜೆಪಿ ವತಿಯಿಂದ ರವಿವಾರ ಆಳಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು, ವೀರಶೈವ ಲಿಂಗಾಯತ ಸಮಾಜದ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಾಸಕರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಹರ್ಷಾನಂದ ಗುತ್ತೇದಾರ ಅವರ ಹೇಳಿಕೆಯನ್ನು ಖಂಡಿಸಿ ಆಳಂದದಲ್ಲಿ ನಡೆದ ಪ್ರತಿಭಟನೆಗೂ ಅಖಿಲ ಭಾರತ ವೀರಶೈವ ಮಹಾಸಭೆಗೂ ಯಾವುದೇ ಸಂಬಂಧವಿಲ್ಲ ಎಂದು ಸಕಲ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಸ್ಪಷ್ಟಪಡಿಸಿದ್ದರು. ಕೆಲ ಕಾಂಗ್ರೆಸ್ ಬೆಂಬಲಿತ ವ್ಯಕ್ತಿಗಳು ವೈಯಕ್ತಿಕ ಹಾಗೂ ರಾಜಕೀಯ ನಿಲುವಿನ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ, ನ. 23ರಂದು ಸಮಾಜದ ವತಿಯಿಂದ ನಡೆಯುವ ಪ್ರತಿಭಟನೆಗೆ ಎಲ್ಲ ಉಪಪಂಗಡಗಳ ಬೆಂಬಲವಿದೆ ಎಂದು ತಿಳಿಸಿದ್ದರು.
ಈ ಬೆಳವಣಿಗೆಗಳ ನಡುವೆಯೇ ಬಿಜೆಪಿ ಬೆಂಬಲಿತ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ರಾಜಕೀಯ ವಲಯದಲ್ಲಿ ಗಮನ ಸೆಳೆಯಿತು.
ಮಲ್ಲಿಕಾರ್ಜುನ ಕಂದಗೋಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಯಾಣರಾವ ಪಾಟೀಲ ಭೂಸನೂರ, ಆನಂದ ಪಾಟೀಲ, ವಿರಣ್ಣ ಮಂಗಾಣೆ, ಬಸವರಾಜ ಬಿರಾದಾರ, ಶ್ರೀಶೈಲ ಖಜೂರಿ, ಶರಣಗೌಡ ಪಾಟೀಲ ದೇವಂತಗಿ, ಹನುಮಂತ ಶೇರಿ, ನಿಜಲಿಂಗಪ್ಪ ಮದಗುಣಕಿ, ಇರಣ್ಣ ಸರ್ವಾಡ, ಹನುಮಂತ ಕಬಾಡೆ, ಶರಣು ಕುಮಸಿ, ಸಂತೋಷ ಹಾದಿಮನಿ, ಸೀತಾರಾಮ ಜಮಾದಾರ್, ಅಮೃತ ಬಿಬ್ರಾಣಿ, ಬಾಬಾಸಾಹೇಬ ಪಾಟೀಲ, ನಿಜಲಿಂಗಪ್ಪ ಕೊರಳ್ಳಿ, ಕುಮಾರ ಬಂಡೆ, ಬಸವರಾಜ ಹತ್ತರಕಿ, ಶಿವಪ್ರಕಾಶ ಹೀರಾ, ಸಿದ್ದು ಪಾಟೀಲ ಶಕಾಪುರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಅಶೋಕ ಹತ್ತರಕಿ, ರಮೇಶ ಬಾಳಿ, ಸುನೀಲ ಹಿರೋಳಿಕರ, ಪ್ರಕಾಶ ಮಾನೆ, ಸಿದ್ರಾಮಪ್ಪ ಚಿಂಚನಸೂರ, ಸಿದ್ದು ಹಿರೋಳಿ, ಸಂಪತಾ ವಾಗ್ಮೊರೆ, ಸುವರ್ಣಾ ಪಾಟೀಲ, ಗೌರಿ ಚೀಚಕೋಟಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.