ಶಹಾಬಾದ್ : ವಿಶ್ವಗುರು, ಜಗಜ್ಯೋತಿ ಬಸವಣ್ಣನವರ ಕುರಿತು ಅವಹೇಳನಕಾರಿ ಪುಸ್ತಕ ಬರೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೇಖಕ ರವಿ ಹಂಜ್ ಹಾಗೂ ವಿಶ್ವೇಶ್ವರ ಭಟ್ ಅವರನ್ನು ಸರ್ಕಾರ ಕೂಡಲೇ ಗಡಿಪಾರು ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮರಿಯಪ್ಪ ಹಳ್ಳಿ ಆಗ್ರಹಿಸಿದರು.

ನಗರದ ನೆಹರೂ ವೃತ್ತದಲ್ಲಿ ಭಾನುವಾರ ಸಂಜೆ ಬಸವಾದಿ ಶರಣರ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಸವಣ್ಣನವರು ಸಮಸಮಾಜ ನಿರ್ಮಾಣದ ಕನಸು ಕಂಡ ಮಹಾನ್ ಮಾನವತಾವಾದಿ. ಅಂತಹ ಮಹನೀಯರ ವಿರುದ್ಧ ಪುಸ್ತಕ ಬರೆಯುವ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಿದರು.

ಈ ಕೃತಿಯ ಹಿಂದೆ ಯಾರಿದ್ದಾರೆ ಎಂಬುದನ್ನು ಸರ್ಕಾರ ಪತ್ತೆಹಚ್ಚಬೇಕು. ಕೇವಲ ಎಫ್‌ಐಆರ್ ದಾಖಲಿಸುವುದರಿಂದ ಸಾಲದು. ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜತೆಗೆ, ಅವರನ್ನು ಗಡಿಪಾರು ಮಾಡುವ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಶ್ವರಾಧ್ಯ ಮಠದ ವಿಜಯಕುಮಾರ ಮುತ್ಯಾ, ಹಡಪದ ಅಪ್ಪಣ್ಣ ಗುರುಪೀಠದ ರಾಜಶಿವಯೋಗಿಗಳು, ಮುಖಂಡರಾದ ಕೃಷ್ಣಪ್ಪ ಕರಣಿಕ, ಮಲ್ಕಣ್ಣ ಮುದ್ದಾ, ರಾಮಣ್ಣ ಇಬ್ರಾಹಿಂಪೂರ, ಶರಣಗೌಡ ಪಾಟೀಲ, ಪೂಜಪ್ಪ ಮೇತ್ರೆ, ಕನಕಪ್ಪ ದಂಡಗುಲಕರ್ ಹಾಗೂ ವಚನೋತ್ಸವ ಸಮಿತಿಯ ಸಿದ್ದೇಶ್ವರ ವಸ್ತ್ರದ ಮಠ ಮಾತನಾಡಿದರು.

ಪ್ರತಿಭಟನೆಯ ವೇಳೆ ಲೇಖಕ ರವಿ ಹಂಜ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಗಿರೀಶ ವಳಸಂಗ, ಸುರೇಶ ಕುಂಬಾರ, ಮಲ್ಲಿಕಾರ್ಜುನ ಪಾಟೀಲ, ಮಲ್ಲಣ್ಣ ಮಸ್ಕಿ, ರಾಜೇಶ ಯನಗುಂಟಿಕರ್, ಸುಭಾಸ ಸಾಕ್ರೆ, ಪ್ರಕಾಶ ವಳಸಂಗ, ಶಿವಕುಮಾರ ಕೊಳ್ಳಿ, ರಮೇಶ ಜೋಗದನಕರ್, ಕುಪೇಂದ್ರ ತುಪ್ಪದ, ಬಸವರಾಜ ಪಾಟೀಲ, ರವಿ ನರೋಣಿ, ವಿಜಯಕುಮಾರ ಟಂಗಳಿ, ಅರುಣ ಜಾಯಿ, ಗಣೇಶ ಜಾಯಿ, ಮಹಾನಂದಿ ಪಾರಾ, ಮಹಾಂತಗೌಡ ಪಾಟೀಲ, ಸಂತೋಷ ಪಾಟೀಲ, ಶರಣಪ್ಪ ಕೊಡದೂರ, ಶಾಂತಗೌಡ ದ್ಯಾಮಗುಂಡ, ಗಿರಿರಾಜ ಪವಾರ, ರಾಯಪ್ಪ ಭಂಡಾರಿ, ಗುರುರಾಜ ತುಂಗಳ, ಸಂಜು ಪಾರಾ, ಶರಣು ಕೌಲಗಿ, ಸಾಗರ ಶಾಹಾಪುರ, ಈರಣ್ಣ ಡಿಗ್ಗಿ ಸೇರಿದಂತೆ ಅನೇಕ ಬಸವಾಭಿಮಾನಿಗಳು ಪಾಲ್ಗೊಂಡಿದ್ದರು.

ಶಾಂತಪ್ಪ ಹಡದಪ ನಿರೂಪಿಸಿ, ಶರಣು ವಸ್ತ್ರದ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಾಜಿದ್‌ ಅಲಿ/ವಾರ್ತಾಭಾರತಿ

ಕಲಬುರಗಿ ಜಿಲ್ಲಾ ವರದಿಗಾರರು

ಸಾಜಿದ್ ಅಲಿ ಅವರು 12 ವರ್ಷಗಳ ಪತ್ರಿಕೋದ್ಯಮ ಅನುಭವ ಹೊಂದಿದ್ದಾರೆ. ವಾರ್ತಾಭಾರತಿ ಮಂಗಳೂರು ಡೆಸ್ಕ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿರುವ ಇವರು, ಕಳೆದ ಏಳು ವರ್ಷಗಳಿಂದ ವಾರ್ತಾಭಾರತಿ ಡಿಜಿಟಲ್ ವೆಬ್‌ಸೈಟ್‌ನ ಕಲಬುರಗಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಕೋಆರ್ಡಿನೇಟರ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ