ಜೇವರ್ಗಿ: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನಂದಿಹಾಳ ಗ್ರಾಮದಲ್ಲಿ 14 ವರ್ಷಗಳಿಂದ ಪ್ರತಿಷ್ಠಾಪಿಸಲಾಗಿದ್ದ ಗಾಣಿಗರ ಆರಾಧ್ಯ ದೇವತೆ ಗಾಣದೇವತೆ ಮೂರ್ತಿಯನ್ನು ಕಿಡಿಗೇಡಿಗಳು ರಾತ್ರೋರಾತ್ರಿ ತೆರವುಗೊಳಿಸಿದ್ದು, ಗಾಣಿಗ ಸಮಾಜದ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಈ ಕೃತ್ಯವನ್ನು ಸಮಾಜ ಖಂಡಿಸುತ್ತದೆ ಎಂದು ಜೇವರ್ಗಿ ತಾಲೂಕು ಗಾಣಿಗ ಸಮಾಜದ ಅಧ್ಯಕ್ಷ ಸುರೇಶ ಪಾಟೀಲ್ ನೇದಲಗಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಂದಿಹಾಳ ಗ್ರಾಮದಲ್ಲಿ 14 ವರ್ಷಗಳಿಂದ ಇದ್ದ ಗಾಣಿಗರ ಆರಾಧ್ಯ ದೇವತೆ ಗಾಣದೇವತೆ ಮೂರ್ತಿಯನ್ನು ಕಿಡಿಗೇಡಿಗಳು ರಾತ್ರೋರಾತ್ರಿ ತೆರವುಗೊಳಿಸಿರುವುದು ಗಾಣಿಗರ ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡಿದೆ. ಎಲ್ಲ ಸಮಾಜಗಳನ್ನು ಪ್ರೀತಿಸಿ, ತನ್ನ ಸಮಾಜದ ಆರಾಧನೆಯನ್ನು ಗೌರವಿಸುವ ಸಮುದಾಯ ಗಾಣಿಗ ಸಮಾಜವಾಗಿದೆ. ಇಂತಹ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕಿಡಿಗೇಡಿಗಳು ನಡೆಸಿರುವ ಷಡ್ಯಂತ್ರವನ್ನು ಗಾಣಿಗರು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಗಾಣಿಗರ ಸ್ವಾಭಿಮಾನದ ಪ್ರತೀಕವಾಗಿರುವ ಗಾಣದೇವತೆ ಮೂರ್ತಿಯನ್ನು ತೆರವುಗೊಳಿಸಿದ ಸ್ಥಳದಲ್ಲಿಯೇ ಮರುಪ್ರತಿಷ್ಠಾಪಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ಧೋರಣೆ ಮುಂದುವರಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor