ಕಲಬುರಗಿ ಜಿಮ್ಸ್ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

Update: 2026-08-15 17:47 IST

ಕಲಬುರಗಿ: ನಗರದ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ್ ಸಿ.ಆರ್. ಹಾಗೂ ಜಿಲ್ಲಾ ಶಸ್ತ್ರಜ್ಞ ಮತ್ತು ಅಧೀಕ್ಷಕರಾದ ಡಾ. ರೂಕಿಯ ಆಸ್ನಾ ರಬಾ ಅವರು ಜಂಟಿಯಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬಳಿಕ ರಾಷ್ಟ್ರಗೀತೆ ಹಾಡಿ ದೇಶಭಕ್ತಿಯ ಭಾವನೆ ವ್ಯಕ್ತಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಉಪ ವೈದ್ಯಕೀಯ ಅಧೀಕ್ಷಕ ಡಾ. ರೇವಣಸಿದ್ದಪ್ಪ ಬೋಸ್ಗೆ, ಎಂ.ಸಿ.ಎಚ್. ಸ್ತ್ರೀರೋಗ ತಜ್ಞೆ ಹಾಗೂ ಮುಖ್ಯಸ್ಥೆ ಡಾ. ಉಷಾ ದೊಡ್ಡಮನಿ, ವೈದ್ಯಾಧಿಕಾರಿಗಳಾದ ಡಾ. ಓಂಪ್ರಕಾಶ್ ಅಂಬೂರೆ, ಡಾ. ನಾಗರಾಜ್ ಪಾಟೀಲ, ನಿಶಾಂತ್ ಪಾಣೆಗಾಂವ್, ಡಾ. ಸುರೇಶಕುಮಾರ ಸುಂಬಡ, ಓಪಿಡಿ ಸರ್ಜನ್ ಡಾ. ಶಾಲನಿ ಸಜ್ಜನಶೆಟ್ಟಿ, ಡಾ. ರವೀಂದ್ರ ನಾಗಲೇಕಾರ್, ಡಾ. ಜಗದೀಶ್ ಎಂ.ಬಿ., ಜಿಲ್ಲಾ ದಂತ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಡಿ., ಜಿಲ್ಲಾ ಎನ್‌ಒಎಚ್‌ಪಿ ನೋಡಲ್ ಅಧಿಕಾರಿ ಡಾ. ರಾಜು ಬಿ. ರಾಮಪುರೆ, ಸಹಾಯಕ ಆಡಳಿತಾಧಿಕಾರಿ ಅಂಬಾರಾಯ ಸಂಕಾ ಹಾಗೂ ತಂಬಾಕು ವ್ಯಸನ ಕೇಂದ್ರದ ಸೈಕಾಲಜಿಸ್ಟ್ ಕೌನ್ಸಿಲರ್ ಮಂಜುನಾಥ್ ಕಂಬಾಳಿಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಿಮ್ಸ್ ಆಸ್ಪತ್ರೆಯ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಮುಖ್ಯಸ್ಥರು, ವೈದ್ಯರು, ಶುಶ್ರೂಷಾ ಸಿಬ್ಬಂದಿ, ಫಾರ್ಮಾಸಿಸ್ಟ್‌ಗಳು, ಕಚೇರಿ ಸಿಬ್ಬಂದಿ, ಗ್ರೂಪ್-ಡಿ ಹಾಗೂ ಭದ್ರತಾ ಸಿಬ್ಬಂದಿ, ನರ್ಸಿಂಗ್ ಕಾಲೇಜು ಮತ್ತು ಎಎನ್‌ಎಂ/ಎಲ್‌ಎಚ್‌ವಿ ಸ್ಕೂಲ್ ಆಫ್ ನರ್ಸಿಂಗ್‌ನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಟೆಲಿಮೆಡಿಸಿನ್, ಮಾನಸಿಕ ರೋಗ, ಆಯುಷ್, ಎಆರ್‌ಟಿ, ವಿಸಿಟಿಸಿ, ಪಿಪಿಟಿಸಿಟಿ ಸೇರಿದಂತೆ ವಿವಿಧ ವಿಭಾಗಗಳ ವೈದ್ಯರು, ಸಮಾಲೋಚಕರು ಹಾಗೂ ಸಿಬ್ಬಂದಿಯೂ ಉಪಸ್ಥಿತರಿದ್ದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ರಾಚಣ್ಣ ಬಿಸಗೊಂಡೆ ಸೇರಿದಂತೆ ಆಸ್ಪತ್ರೆಯ ಎಲ್ಲಾ ವಿಭಾಗಗಳ ನಿಯಮಿತ ಹಾಗೂ ಗುತ್ತಿಗೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News