Kalaburagi | ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ: ಮದರಸಾ ವಿದ್ಯಾರ್ಥಿಗಳಿಂದ ಮನಮೋಹಕ ಗ್ರ್ಯಾಂಡ್ ಅಸೆಂಬ್ಲಿ

Update: 2026-08-15 17:45 IST

ಕಲಬುರಗಿ: ನಗರದ ದಾರುಲ್ ಉಲೂಮ್ ಖಾನ್ಕಾಹ್ ಹಜ್ರತ್ ಖ್ವಾಜಾ ಬಂದೇ ನವಾಝ್ (ರ.ಅ) ಹಾಗೂ ಸಿರಾಜುಲ್ ಉಲೂಮ್ ಶೈಖ್-ರೋಜಾ ಮದರಸಾ ವಿದ್ಯಾರ್ಥಿಗಳ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮನಮೋಹಕ ಗ್ರ್ಯಾಂಡ್ ಅಸೆಂಬ್ಲಿ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಜ್ರತ್ ಯದುಲ್ಲಾಹ್ ಹುಸೈನಿ ಉರ್ಫ್ ನಿಜಾಮ್ ಬಾಬಾ ಸಾಹೇಬ್ ಭಾಗವಹಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಪೂರ್ವಜರು ಮಾಡಿದ ತ್ಯಾಗ ಹಾಗೂ ಬಲಿದಾನಗಳನ್ನು ಸ್ಮರಿಸಿದರು. ದೇಶದ ಏಕತೆ, ಸೌಹಾರ್ದತೆ ಮತ್ತು ರಾಷ್ಟ್ರಪ್ರೇಮವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಾ ನಶೀನ್ ಶೈಖೇ ದಖ್ಖನ್ ತಾಹಿರ್ ಬಾಬಾ ಸಾಹೇಬ್ ಅವರು ದುಆ ನೆರವೇರಿಸಿದರು. ರಊಫ್ ಖಾದ್ರಿ ಸಾಹೇಬ್ ಅವರು ದೇಶಪ್ರೇಮ ಹಾಗೂ ರಾಷ್ಟ್ರದ ಮೇಲಿನ ಪ್ರತಿಯೊಬ್ಬರ ಜವಾಬ್ದಾರಿಗಳ ಕುರಿತು ಸಂದೇಶ ನೀಡಿದರು.

ಮದರಸಾ ವಿದ್ಯಾರ್ಥಿಗಳ ಶಿಸ್ತುಬದ್ಧ ಹಾಗೂ ಆಕರ್ಷಕ ಗ್ರ್ಯಾಂಡ್ ಅಸೆಂಬ್ಲಿ ಕಾರ್ಯಕ್ರಮ ಗಮನ ಸೆಳೆಯಿತು. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕಾರ ಹಾಗೂ ಮೌಲ್ಯಾಧಾರಿತ ಜೀವನ ರೂಪಿಸುವಲ್ಲಿ ಗುರು ವೃಂದದ ಪರಿಶ್ರಮ ಮತ್ತು ಮಾರ್ಗದರ್ಶನದ ಪಾತ್ರವನ್ನು ಗಣ್ಯರು ಶ್ಲಾಘಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News