×
Ad

Kalaburagi | ಆಕಾಶವಾಣಿ ʼಹಲೋ ಪೊಲೀಸ್ ಕಮಿಷನರ್ʼ ನೇರ ಫೋನ್ ಇನ್ ಕಾರ್ಯಕ್ರಮ

Update: 2026-05-21 17:09 IST

ಕಲಬುರಗಿ: ಆಕಾಶವಾಣಿ ಕಲಬುರಗಿ ಕೇಂದ್ರವು ಮೇ 22(ಶುಕ್ರವಾರ) ರ ಬೆಳಗ್ಗೆ 11 ಗಂಟೆಗೆ ಕಲ್ಯಾಣ ವಾಣಿ ಕಾರ್ಯಕ್ರಮದಲ್ಲಿ “ಹಲೋ ಪೊಲೀಸ್ ಕಮಿಷನರ್” ನೇರ ಫೋನ್ ಇನ್ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಕಲಬುರಗಿ ನಗರ ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ. ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಳುಗರ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಲಿದ್ದಾರೆ.

ಇ-ಚಲನ್, ಹೆಲ್ಮೆಟ್ ಕಡ್ಡಾಯ, ಸ್ಮಾರ್ಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್, ಸೈಬರ್ ಅಪರಾಧ, ಡಿಜಿಟಲ್ ಅರೆಸ್ಟ್, ಡ್ರಗ್ ಮುಕ್ತ ಕಲಬುರಗಿ ಮುಂತಾದ ವಿಷಯಗಳ ಕುರಿತು ಕೇಳುಗರು ಪ್ರಶ್ನೆಗಳನ್ನು ಕೇಳಬಹುದು.

ಈ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಪ್ರಶ್ನೆಗಳನ್ನು ಕೇಳಲು ನಿಲಯದ ದೂರವಾಣಿ ಸಂಖ್ಯೆಗಳು, 08472-295986, 08472-295987, ಹಾಗೂ 08472-310105 ಗೆ ಕರೆ ಮಾಡಬಹುದಾಗಿದೆ ಎಂದು ಕಲಬುರಗಿ ಆಕಾಶವಾಣಿ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News