×
Ad

ಕಲಬುರಗಿ ಕಲಾವಿದ ಗಿರೀಶ್ ಕುಲಕರ್ಣಿಗೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿ

Update: 2026-06-01 21:28 IST

ಕಲಬುರಗಿ: ನಗರದ ಖ್ಯಾತ ಸಮಕಾಲೀನ ಕಲಾವಿದ ಗಿರೀಶ್ ಕುಲಕರ್ಣಿ ಅವರಿಗೆ ತೆಲಂಗಾಣ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿತ್ರಮಯೀ ಸ್ಟೇಟ್ ಗ್ಯಾಲರಿ ಆಫ್ ಆರ್ಟ್ ವತಿಯಿಂದ ಆಯೋಜಿಸಲಾದ “ಆಲ್ ಇಂಡಿಯಾ ಆರ್ಟ್ ಸ್ಪರ್ಧೆ ಮತ್ತು ಪ್ರದರ್ಶನ-2026”ರ 7ನೇ ಆವೃತ್ತಿಯಲ್ಲಿ ನಗದು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹೈದರಾಬಾದ್‌ನ ಮಾಧಾಪುರದ ಕಾವೇರಿ ಹಿಲ್ಸ್ ನಲ್ಲಿರುವ ಸ್ಟೇಟ್ ಗ್ಯಾಲರಿ ಆಫ್ ಆರ್ಟ್ ನಲ್ಲಿ ನಡೆಯಲಿರುವ ಈ ರಾಷ್ಟ್ರೀಯ ಮಟ್ಟದ ಕಲಾ ಪ್ರದರ್ಶನದಲ್ಲಿ ದೇಶದ ವಿವಿಧ ಭಾಗಗಳ ಕಲಾವಿದರು ಭಾಗವಹಿಸುತ್ತಿದ್ದಾರೆ. ಇದರಲ್ಲಿ ಗಿರೀಶ್ ಕುಲಕರ್ಣಿ ಅವರ ಕಲಾಕೃತಿ ಆಯ್ಕೆ ಆಗಿದ್ದು ತೀರ್ಪುಗಾರರ ಸಮಿತಿಯವರು ಅತ್ಯುತ್ತಮ ಕೃತಿ ಎಂದು ಪರಿಗಣಿಸಿ ನಗದು ಪ್ರಶಸ್ತಿಗೆ ಶಿಫಾರಸು ಮಾಡಿದ್ದಾರೆ.

ಪ್ರದರ್ಶನವು ಮೇ23 ರಂದು ಉದ್ಘಾಟನೆಯಾಗಿದ್ದು ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಮಾರೋಪ ಕಾರ್ಯಕ್ರಮ ಜೂನ್ 6 ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಪ್ರಶಸ್ತಿ, ಪ್ರಮಾಣಪತ್ರ ಹಾಗೂ ಸ್ಮರಣಿಕೆಯನ್ನು ವಿತರಿಸಲಾಗುತ್ತದೆ.

ಗಿರೀಶ್ ಕುಲಕರ್ಣಿ ಅವರ ಈ ಸಾಧನೆಗೆ ಕಲಬುರಗಿ ಕಲಾವಿದರು ಹಾಗೂ ಸ್ನೇಹಿತರು ಅಭಿನಂದನೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News