ಕಲಬುರಗಿ: ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್ ನೀಡುವ 2025ನೇ ಸಾಲಿನ ಕಾವ್ಯಾನಂದ ಪುರಸ್ಕಾರಕ್ಕೆ ಡಾ.ವಿಕ್ರಮ ವಿಸಾಜಿ ಅವರ ‘ಕಲ್ಯಾಣ ಪುರ’ ನಾಟಕ ಕೃತಿ ಆಯ್ಕೆಯಾಗಿದೆ.

ಖ್ಯಾತ ಸಾಹಿತಿ ಡಾ.ಸಿದ್ದಯ್ಯ ಪುರಾಣಿಕ ಅವರ ಕಾವ್ಯನಾಮ ‘ಕಾವ್ಯಾನಂದ’ ಹೆಸರಿನಲ್ಲಿ ನೀಡಲಾಗುವ ಈ ಪುರಸ್ಕಾರವು 50,000 ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್ ಅಧ್ಯಕ್ಷ ಪ್ರಸನ್ನ ಕುಮಾರ ಪುರಾಣಿಕ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor