Kalaburagi | ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಕುಶಾಗ್ರಮತಿ ಖರ್ಗೆ’ ಪ್ರಶಸ್ತಿ ಪ್ರದಾನ
ಡಾ.ಮಲ್ಲಿಕಾರ್ಜುನ ಖರ್ಗೆ ಜನ್ಮದಿನ ಅಂಗವಾಗಿ ಸಾಧಕರಿಗೆ ಗೌರವ
ಕಲಬುರಗಿ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ 85ನೇ ಜನ್ಮದಿನದ ಅಂಗವಾಗಿ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ನಗರದ ಸೂಪರ್ ಮಾರ್ಕೆಟ್‌ನ ಕೆಕೆಸಿಸಿಐಯ ಶ್ರೀನಿವಾಸರಾವ ರಥೋಜಿ ಸಭಾಂಗಣದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಕುಶಾಗ್ರಮತಿ ಖರ್ಗೆ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಪೂಜ್ಯ ಹವಾ ಮಲ್ಲಿನಾಥ ಮಹಾರಾಜರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ, ಬಸವರಾಜ ದೇಶಮುಖ, ಶರಣಬಸಪ್ಪ ಪಪ್ಪಾ, ರಾಜು ದೇಶಮುಖ, ಲಕ್ಷ್ಮೀನಾರಾಯಣ ಮನೋಕರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದ ಅಧ್ಯಕ್ಷ ಶಾಂತರೆಡ್ಡಿ ಪೇಠಶೀರೂರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರನ್ನು ‘ಕುಶಾಗ್ರಮತಿ ಖರ್ಗೆ’ ಪ್ರಶಸ್ತಿಯೊಂದಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜ, ಶಿಕ್ಷಣ, ವೈದ್ಯಕೀಯ, ಕಲೆ, ಸಾಹಿತ್ಯ, ಸಾಮಾಜಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಉಮಾಕಾಂತ ನಿಗ್ಗುಡಗಿ, ಡಾ. ಶಿವಪುತ್ರಪ್ಪ ಹರವಾಳ, ಪ್ರಭಾಕರ ಜೋಶಿ, ರಾಘವೇಂದ್ರ ಮೈಲಾಪುರ, ಲಕ್ಷ್ಮಣ ದಸ್ತಿ, ನಜೀರ್ ಮಿಯಾನ್ ಹಟ್ಟಿ, ಡಾ. ಲಕ್ಷ್ಮೀ ಪಾಟೀಲ ಮಾಕಾ, ವೈಷ್ಣವಿ ಎಸ್. ಅಹಂಕಾರಿ, ಸರೇಖಾ ಹೊನಗುಂಟಾ, ಸೋಮಶೇಖರ ಬಣಗಾರ ಸೊನ್ನ, ದಯಾನಂದ ಮನೋಕರ್ ಹಾಗೂ ಶಿವು ಹಳ್ಳಿಖೇಡ ಅವರಿಗೆ 'ಕುಶಾಗ್ರಮತಿ ಖರ್ಗೆ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.