Kalaburagi | ಸಂವಿಧಾನದ ಆಶಯಗಳ ಪಾಲನೆಗೆ ಯುವಜನರು ಬದ್ಧರಾಗಬೇಕು: ಡಾ.ಚಂದ್ರಶೇಖರ್ ದೊಡ್ಡಮನಿ
ಸಂವಿಧಾನ ದಿನಾಚರಣೆ ಕಾರ್ಯಕ್ರಮ
ಕಲಬುರಗಿ: ಸಾವಿರಾರು ಜಾತಿಗಳು ಹಾಗೂ ವಿವಿಧ ಧರ್ಮಗಳ ಜನರಿಗೆ ಗೌರವಯುತವಾಗಿ ಬದುಕಲು ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸಿರುವ ಭಾರತದ ಸಂವಿಧಾನ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ. ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಿರಲು ಸಂವಿಧಾನವೇ ಆಧಾರವಾಗಿದೆ ಎಂದು ಪ್ರಾಚಾರ್ಯ ಡಾ.ಚಂದ್ರಶೇಖರ್ ದೊಡ್ಡಮನಿ ಹೇಳಿದರು.
ನಗರದ ಸ್ಟೇಶನ್ ಬಜಾರ್ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಹಾಗೂ ಯುವಜನರು ರಾಷ್ಟ್ರದ ಅಭಿವೃದ್ಧಿ ಮತ್ತು ಸಂವಿಧಾನದ ರಕ್ಷಣೆಗಾಗಿ ಸೈನಿಕರಂತೆ ಕಾರ್ಯನಿರ್ವಹಿಸಬೇಕು. ಸಂವಿಧಾನದ ಆಶಯಗಳನ್ನು ಅರಿತುಕೊಂಡು ಅವುಗಳ ಪಾಲನೆಗೆ ಬದ್ಧರಾಗಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀನಿವಾಸ್ ಐ.ಜಿ. ಅವರು ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಶೈಲ್ ಕುರ್ದ್, ಬಲರಾಮ್ ಚೌವ್ಹಾಣ, ಮಹಿಬೂಬ್ ನದಾಫ್, ವಿಜಯಲಕ್ಷ್ಮಿ ರೆಡ್ಡಿ, ರೋಹಿಣಿ ಕೆ.ಎಸ್., ರಾಜೇಶ್ ಕೆ.ಜೆ., ನೇಸರ್ ಬೀಳಿಗಿಮಠ, ಲಕ್ಷ್ಮಿಕಾಂತ್ ಡೋಳೆ, ಸುಮಾ, ನಿರ್ಮಲಾ ಪವಾರ್, ರಾಜೇಶ್ವರಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.