ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಶೇ.86.97 ರಷ್ಟು ದಾಖಲೆ ಮಟ್ಟದ ಮತದಾನ
ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಶುಕ್ರವಾರ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಶೇ. 86.97ರಷ್ಟು ಮತದಾನ ದಾಖಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತೆ ಝಹೀರಾ ನಸೀಮ್ ತಿಳಿಸಿದ್ದಾರೆ.
ಶಿಕ್ಷಕ ಮತದಾರರು ಅತ್ಯಂತ ಉತ್ಸಾಹದಿಂದ ಚುನಾವಣೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಂತಿಮ ಚುನಾವಣಾ ಅಂಕಿಅಂಶಗಳ ಪ್ರಕಾರ, ಕ್ಷೇತ್ರದಲ್ಲಿ ಒಟ್ಟು 34,784 ನೋಂದಾಯಿತ ಮತದಾರರಿದ್ದು, ಅವರಲ್ಲಿ 30,250 ಮಂದಿ ಮತ ಚಲಾಯಿಸಿದ್ದಾರೆ. ಈ ಮೂಲಕ ಶೇ. 86.97ರಷ್ಟು ಮತದಾನವಾಗಿದೆ.
ಪುರುಷ ಮತದಾರರ ಪೈಕಿ 18,008 ಮಂದಿ ಮತ ಚಲಾಯಿಸಿದ್ದು, ಶೇ. 89.86ರಷ್ಟು ಮತದಾನ ದಾಖಲಾಗಿದೆ. ಮಹಿಳಾ ಮತದಾರರ ಪೈಕಿ 12,242 ಮಂದಿ ಮತ ಚಲಾಯಿಸಿದ್ದು, ಶೇ. 83.03ರಷ್ಟು ಮತದಾನವಾಗಿದೆ.
ಜಿಲ್ಲಾವಾರು ಮತದಾನದ ವಿವರ :
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 10,652 ಮತದಾರರ ಪೈಕಿ 8,988 ಮಂದಿ ಮತ ಚಲಾಯಿಸಿದ್ದಾರೆ. ಇವರಲ್ಲಿ 5,002 ಪುರುಷರು ಹಾಗೂ 3,986 ಮಹಿಳೆಯರು ಇದ್ದಾರೆ.
ಬೀದರ್ ಜಿಲ್ಲೆಯಲ್ಲಿ ಒಟ್ಟು 7,038 ಮತದಾರರ ಪೈಕಿ 6,086 ಮಂದಿ ಮತ ಚಲಾಯಿಸಿದ್ದಾರೆ. ಇವರಲ್ಲಿ 3,408 ಪುರುಷರು ಹಾಗೂ 2,678 ಮಹಿಳೆಯರು ಇದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಒಟ್ಟು 5,402 ಮತದಾರರ ಪೈಕಿ 4,648 ಮಂದಿ ಮತದಾನ ಮಾಡಿದ್ದಾರೆ. ಇವರಲ್ಲಿ 2,787 ಪುರುಷರು ಹಾಗೂ 1,861 ಮಹಿಳೆಯರು ಇದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 3,393 ಮತದಾರರ ಪೈಕಿ 2,935 ಮಂದಿ ಮತ ಚಲಾಯಿಸಿದ್ದಾರೆ. ಇವರಲ್ಲಿ 1,615 ಪುರುಷರು ಹಾಗೂ 1,320 ಮಹಿಳೆಯರು ಇದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಒಟ್ಟು 3,326 ಮತದಾರರ ಪೈಕಿ 3,029 ಮಂದಿ ಮತದಾನ ಮಾಡಿದ್ದಾರೆ. ಇವರಲ್ಲಿ 2,030 ಪುರುಷರು ಹಾಗೂ 999 ಮಹಿಳೆಯರು ಇದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 2,714 ಮತದಾರರ ಪೈಕಿ 2,513 ಮಂದಿ ಮತ ಚಲಾಯಿಸಿದ್ದಾರೆ. ಇವರಲ್ಲಿ 1,732 ಪುರುಷರು ಹಾಗೂ 781 ಮಹಿಳೆಯರು ಇದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 2,259 ಮತದಾರರ ಪೈಕಿ 2,051 ಮಂದಿ ಮತ ಚಲಾಯಿಸಿದ್ದಾರೆ. ಇವರಲ್ಲಿ 1,434 ಪುರುಷರು ಹಾಗೂ 617 ಮಹಿಳೆಯರು ಇದ್ದಾರೆ.
ಚುನಾವಣಾ ಪ್ರಕ್ರಿಯೆಯನ್ನು ಶಾಂತಿಯುತವಾಗಿ ಹಾಗೂ ಸುಸೂತ್ರವಾಗಿ ನಡೆಸಲು ಸಹಕರಿಸಿದ ಎಲ್ಲ ಶಿಕ್ಷಕ ಮತದಾರರು, ಸಿಬ್ಬಂದಿ ವರ್ಗ ಹಾಗೂ ಅಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತೆ ಝಹೀರಾ ನಸೀಮ್ ಧನ್ಯವಾದ ತಿಳಿಸಿದ್ದಾರೆ.