ರಾಷ್ಟ್ರೀಯ ಗೋರಸೇನಾ ಸಂಘಟನೆಯ ಚಿತ್ತಾಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ
ಚಿತ್ತಾಪುರ: ರಾಷ್ಟ್ರೀಯ ಗೋರಸೇನಾ ಸಂಘಟನೆಯ ನೂತನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ಆಯ್ಕೆ ಪ್ರಕ್ರಿಯೆಯು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ವಿಜಯಕುಮಾರ ಚವ್ಹಾಣ, ಕಾರ್ಯಾಧ್ಯಕ್ಷರಾಗಿ ಮೋರ್ತಿ ಚವ್ಹಾಣ, ಉಪಾಧ್ಯಕ್ಷರಾಗಿ ದಿನೇಶ ರಾಠೋಡ ಹಣಿಕೇರಿ, ಅನೀಲ್ ವಾಲ್ಮೀಕ್ ಚಿತ್ತಾಪುರ, ರಾಜು ರಾಮತೀರ್ಥ ಹಾಗೂ ಆನಂದ ಜಾಧವ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಆಕಾಶ ಚವ್ಹಾಣ, ಸಹ ಕಾರ್ಯದರ್ಶಿಯಾಗಿ ನೇರು ಪವಾರ್, ಖಜಾಂಚಿಯಾಗಿ ಶ್ರೀಕಾಂತ ರಾಠೋಡ, ನಗರಾಧ್ಯಕ್ಷರಾಗಿ ಗಣೇಶ ಚವ್ಹಾಣ, ನಗರ ಕಾರ್ಯದರ್ಶಿಯಾಗಿ ಸಿದ್ರಾಮ ಭೋಜು ರಾಠೋಡ, ನಗರ ಕಾರ್ಯಾಧ್ಯಕ್ಷರಾಗಿ ರಾಮ್ ಚವ್ಹಾಣ ಹಾಗೂ ನಗರ ಉಪಾಧ್ಯಕ್ಷರಾಗಿ ತಿರುಪತಿ ರಾಠೋಡ ಆಯ್ಕೆಯಾದರು.
ನೂತನ ಪದಾಧಿಕಾರಿಗಳನ್ನು ಸಮಾಜದ ಮುಖಂಡರು ಹಾಗೂ ಗಣ್ಯರು ಶಾಲು ಹೊದಿಸಿ, ಹಾರ ಹಾಕಿ ಅಭಿನಂದಿಸಿ ಶುಭ ಹಾರೈಸಿದರು.
ನಂತರ ರಾಷ್ಟ್ರೀಯ ಗೋರಸೇನಾ ಸಂಘಟನೆಯ ಸಂಘಟನಾ ಕಾರ್ಯದರ್ಶಿ ನೇಹರು ಚಿನ್ನ ರಾಠೋಡ ಮಾತನಾಡಿ, ಸಮಾಜದ ಅಭಿವೃದ್ಧಿ, ಸಂಘಟನೆಯ ಬಲವರ್ಧನೆ ಹಾಗೂ ಸಮುದಾಯದ ಏಳಿಗೆಗಾಗಿ ನೂತನ ಪದಾಧಿಕಾರಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು. ಸಮಾಜದ ಯುವಜನರಿಗೆ ಪ್ರೋತ್ಸಾಹ ನೀಡುವುದು, ಶಿಕ್ಷಣಕ್ಕೆ ಆದ್ಯತೆ ನೀಡುವುದು ಹಾಗೂ ಸಮಾಜದ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಸಮಾಜದ ಸರ್ವತೋಮುಖ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಕಂದಾಯ ತಾಂಡಗಳ ದರ್ಜೆ ಹಾಗೂ ಸಂವಿಧಾನಬದ್ಧ ಸಾಮಾಜಿಕ ಹಕ್ಕುಗಳಿಗಾಗಿ ಸಂಘಟನೆ ಶ್ರಮಿಸಲಿದೆ. ಸಮಾಜದ ಮೇಲೆ ನಡೆಯುತ್ತಿರುವ ಶೋಷಣೆಯ ವಿರುದ್ಧ ಹೋರಾಡಿ ನ್ಯಾಯ ಒದಗಿಸುವುದು ಸಂಘಟನೆಯ ಉದ್ದೇಶವಾಗಿದೆ. ತಾಲೂಕಿನ ತಾಂಡಗಳಲ್ಲಿ ಘಟಕಗಳನ್ನು ರಚಿಸಿ ಸಂಘಟನೆಯನ್ನು ಬಲಪಡಿಸುವುದರ ಜೊತೆಗೆ ವ್ಯಸನಮುಕ್ತ ಹಾಗೂ ವರದಕ್ಷಿಣೆ ಮುಕ್ತ ತಾಂಡಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ರಾಷ್ಟ್ರೀಯ ಗೋರಸೇನಾ ಸಂಘಟನೆಯ ರಾಜ್ಯಾಧ್ಯಕ್ಷ ರವಿ ಕಾರಬಾರಿ ಹಾಗೂ ತಾಲೂಕು ಅಧ್ಯಕ್ಷ ವಿಜಯಕುಮಾರ ಚವ್ಹಾಣ ಮಾತನಾಡಿದರು.
ಈ ಸಂದರ್ಭದಲ್ಲಿ ಅಶ್ವಥ ರಾಠೋಡ, ಶಿವರಾಮ್ ಚವ್ಹಾಣ, ಕುಮಾರ ಚವ್ಹಾಣ ಯಾಗಾಪುರ, ಶರಣಕುಮಾರ ಚವ್ಹಾಣ ಯಾಗಾಪುರ, ರವಿ ರಾಠೋಡ ಯಾಗಾಪುರ, ಮನೋಜ್ ರಾಠೋಡ್ ಚಿತ್ತಾಪುರ, ರಾಮ್ ರಾಠೋಡ ವಾಡಿ, ಸಂಜು ಜಾಧವ ವಾಡಿ, ಸೀತಾರಾಮ್ ರಾಠೋಡ ಯಡ್ರಾಮಿ, ಶಂಕರ ರಾಠೋಡ ನಾಲವಾರ, ಶಂಕರ್ ರಾಠೋಡ ಬೆಳಗೇರಿ, ಜಗದೀಶ ಪವಾರ್ ಚಿತ್ತಾಪುರ, ಸುರೇಶ ಚವ್ಹಾಣ ಚಿತ್ತಾಪುರ ಸೇರಿದಂತೆ ಸಮಾಜದ ಮುಖಂಡರು, ನೂತನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.