×
Ad

ಕಾಸರಗೋಡು: ರಸ್ತೆ ಅಪಘಾತ; ಮಗ ಮೃತ್ಯು, ತಂದೆಗೆ ಗಂಭೀರ ಗಾಯ

Update: 2026-05-28 14:49 IST

ಕಾಸರಗೋಡು: ಸ್ಕೂಟರ್ ಹಾಗೂ ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಮಗ ಮೃತಪಟ್ಟು, ತಂದೆ ಗಂಭೀರ ಗಾಯಗೊಂಡ ಘಟನೆ ಪೆರ್ಮುದೆ ಸಮೀಪದ ಪೆರಿಯಡ್ಕ ಎಂಬಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ

ಸ್ಕೂಟರ್ ಸವಾರ ಬಾಯಾರು ನೆತ್ತರಗುಳಿಯ ಎನ್.ಕಿಶನ್ ( 24) ಮೃತಪಟ್ಟವರು. ಹಿಂಬದಿ ಸವಾರರಾಗಿದ್ದ ತಂದೆ ಮಾಧವ ದೇವಾಡಿಗ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಿಶನ್ ಚಲಾಯಿಸುತ್ತಿದ್ದ ಸ್ಕೂಟರ್ ಗೆ ಎದುರಿನಿಂದ ಬಂದ ಬೈಕ್ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ  ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News