ಕಾಸರಗೋಡು: ಎರಡು ಸ್ವಿಫ್ಟ್ ಕಾರುಗಳು ಲಾರಿಗೆ ಢಿಕ್ಕಿ ಹೊಡೆದ ಘಟನೆ ಬದಿಯಡ್ಕ ಸಮೀಪದ ಕನ್ಯಪಾಡಿ ತಿರುವಿನಲ್ಲಿ ರವಿವಾರ ರಾತ್ರಿ ಸುಮಾರು 1.45ರ ವೇಳೆಗೆ ನಡೆದಿದೆ.

ಕುಂಬಳೆ ಕಡೆಯಿಂದ ಬರುತ್ತಿದ್ದ ಎರಡು ಸ್ವಿಫ್ಟ್ ಕಾರುಗಳು ಅತಿವೇಗವಾಗಿ ಸಂಚರಿಸುತ್ತಿದ್ದ ವೇಳೆ ಎದುರು ದಿಕ್ಕಿನಿಂದ ಬಂದ ಲಾರಿಗೆ ಢಿಕ್ಕಿ ಹೊಡೆದಿವೆ ಎಂದು ತಿಳಿದು ಬಂದಿದೆ. 

ಢಿಕ್ಕಿಯ ರಭಸಕ್ಕೆ ಕಾರುಗಳು ಹಾಗೂ ಲಾರಿ ನಜ್ಜು ಗುಜ್ಜಾಗಿವೆ. ಗಾಯಗೊಂಡವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor