ಅ.10, 11ರಂದು ಸಅದಿಯ್ಯದಲ್ಲಿ ತಾಜುಲ್ ಉಲಮಾ, ನೂರುಲ್ ಉಲಮಾ ಆಂಡ್ ನೇರ್ಚೆ, ಸನದ್ ದಾನ ಸಮ್ಮೇಳನ
ದೇಳಿ : ತಾಜುಲ್ ಉಲಮಾ ಸಯ್ಯಿದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿ ಉಳ್ಳಾಳ್ ತಂಙಳ್ ಮತ್ತು ನೂರುಲ್ ಉಲಮಾ ಎಂ.ಎ. ಅಬ್ದುಲ್ ಖಾದಿರ್ ಮುಸ್ಲಿಯಾರ್ ಅವರ ಆಂಡ್ ನೇರ್ಚೆ, ಸನದ್ ದಾನ ಸಮ್ಮೇಳನ ಅ. 10 ಮತ್ತು 11ರಂದು ಸಅದಾಬಾದ್‌ನಲ್ಲಿ ನಡೆಯಲಿದೆ.
ಅಧ್ಯಯನ ಪೂರ್ಣಗೊಳಿಸಿದ 178 ವಿದ್ಯಾರ್ಥಿಗಳಿಗೆ ಸಅದಿ ಪದವಿ, 43 ವಿದ್ಯಾರ್ಥಿಗಳಿಗೆ ಅಫ್ಸಲಿ ಪದವಿ, ಪವಿತ್ರ ಖುರಾನ್ ಕಂಠಪಾಠ ಮಾಡಿದ 20 ವಿದ್ಯಾರ್ಥಿಗಳಿಗೆ ಹಾಫಿಝ್ ಪದವಿ ನೀಡಲಾಗುವುದು.
ಆಂಡ್ ನೇರ್ಚೆಯ ಭಾಗವಾಗಿ ಅ.9ರ ಮಧ್ಯಾಹ್ನ 1.30ಕ್ಕೆ ನಡೆಯುವ ಎಟ್ಟಿಕ್ಕುಳಂ ತಾಜುಲ್ ಉಲಮಾ ಮಖಾಂ ಝಿಯಾರತ್‌ಗೆ ಸಯ್ಯಿದ್ ಜುನೈದ್ ಅಲ್ ಬುಖಾರಿ ಮಾಟ್ಟೂಲ್ ನೇತೃತ್ವ ನೀಡುವರು.
ಅ.10ರ ಬೆಳಗ್ಗೆ 9.30ಕ್ಕೆ ಜಲಾಲಿಯ್ಯ ಆಡಿಟೋರಿಯಂನಲ್ಲಿ ನಡೆಯುವ ಕುಟುಂಬ ವೇದಿಕೆಯಲ್ಲಿ ಸಯ್ಯಿದ್ ಜಲಾಲುದ್ದೀನ್ ಅಲ್‌ಹಾದಿ ತಂಙಳ್ ಆದೂರು ಪ್ರಾರ್ಥನೆ ನಡೆಸುವರು. ಸ್ವಾಗತ ಸಂಘದ ಖಜಾಂಚಿ ಇಬ್ರಾಹಿಂ ಹಾಜಿ ಕಲ್ಲಟ್ರ ಅಧ್ಯಕ್ಷತೆಯಲ್ಲಿ ಎಂ.ಎ. ಅಬ್ದುಲ್ ವಹಾಬ್ ತೃಕ್ಕರಿಪ್ಪೂರ್ ಉದ್ಘಾಟಿಸುವರು. ಇಬ್ರಾಹಿಂ ಸಖಾಫಿ ಪುಝಕ್ಕಾಟ್ಟಿರಿ “ಇಸ್ಲಾಂ ಎತ್ತಿಹಿಡಿದ ಮಹಿಳಾ ಮಹತ್ವ” ಎಂಬ ವಿಷಯದಲ್ಲಿ ತರಗತಿ ನಡೆಸುವರು.
ಅಂದು ಸಂಜೆ 4.30ಕ್ಕೆ ನಡೆಯುವ ನೂರುಲ್ ಉಲಮಾ ಎಂ.ಎ. ಉಸ್ತಾದ್ ಕಲ್ಲಟ್ರ ಅಬ್ದುಲ್ ಖಾದಿರ್ ಹಾಜಿ ಝಿಯಾರತ್‌ಗೆ ಸಯ್ಯಿದ್ ಮುಹಮ್ಮದ್ ಮದನಿ ತಂಙಳ್ ಮೊಗ್ರಾಲ್ ನೇತೃತ್ವ ನೀಡುವರು. ನಂತರ ಸ್ವಾಗತ ಸಂಘದ ಅಧ್ಯಕ್ಷ ಸಯ್ಯಿದ್ ಪಿ.ಎಸ್. ಆಟ್ಟಕ್ಕೋಯ ತಂಙಳ್ ಬಾಹಸನ್ ಪಂಜಿಕ್ಕಲ್ ಧ್ವಜಾರೋಹಣ ಮಾಡುವರು. ನಂತರ ತಾಜುಲ್ ಉಲಮಾ, ನೂರುಲ್ ಉಲಮಾ ಮೌಲಿದ್ ಮಜ್ಲಿಸ್ ಸಯ್ಯಿದ್ ಇಸ್ಮಾಈಲ್ ಹಾದಿ ತಂಙಳ್ ಪಾನೂರಿನ ಪ್ರಾರ್ಥನೆಯೊಂದಿಗೆ ಆರಂಭವಾಗುವುದು.
ಸಯ್ಯಿದ್ ತ್ವಯ್ಯಿಬುಲ್ ಬಾಖಾರಿ ತೃಕ್ಕರಿಪ್ಪೂರ್, ಸಯ್ಯಿದ್ ಶಾಫಿ ತಂಙಳ್ ಬಾಅಲವಿ ವಳಪಟ್ಟಣಂ, ಸಯ್ಯಿದ್ ಅಬ್ದುಲ್ ರಹ್ಮಾನ್ ಶಹೀರ್ ಅಲ್‌ಬುಖಾರಿ, ಸಯ್ಯಿದ್ ಜಮಲಲ್ಲೈಲಿ ತಂಙಳ್ ಕರ, ಸಯ್ಯಿದ್ ಇಸ್ಮಾಈಲ್ ಮದನಿ ತಂಙಳ್ ಉಜಿರೆ, ಸಯ್ಯಿದ್ ಅಬ್ದುಲ್ ರಹ್ಮಾನ್ ಮಶ್ಹೂದ್ ಅಲ್‌ಬುಖಾರಿ ಕುರ, ಸಯ್ಯಿದ್ ಹಿಬತುಲ್ಲಾ ಅಹ್ಸನಿ ಅಲ್ ಮಶ್ಹೂರ್ ನೇತೃತ್ವ ನೀಡುವರು.
ಕಾಟ್ಟಿಪ್ಪಾರ ಅಬ್ದುಲ್ ಖಾದರ್ ಸಖಾಫಿ ಅನುಸ್ಮರಣಾ ಭಾಷಣ ನಡೆಸುವರು. 7 ಗಂಟೆಗೆ ಜಲಾಲಿಯ್ಯ ದಿಕ್ರ್ ಹಲ್ಕಾಗೆ ಸಯ್ಯಿದ್ ಝೈನುಲ್ ಆಬಿದೀನ್ ಅಲ್ ಅಹ್ದಲ್ ಕಣ್ಣವಂ ನೇತೃತ್ವ ನೀಡುವರು. ಅಬ್ದುಲ್ ಗಫ್ಫಾರ್ ಸಅದಿ ರಂಡತ್ತಾಣಿ, ಮುಹಮ್ಮದ್ ರಫೀಖ್ ಸಅದಿ ದೇಲಂಪಾಡಿ ಭಾಷಣ ಮಾಡುವರು. ಸಯ್ಯಿದ್ ಸುಹೈಲ್ ಅಸ್ಸಖಾಫ್ ಮಡಕ್ಕರ ಸಮಾರೋಪ ಪ್ರಾರ್ಥನೆಗೆ ನೇತೃತ್ವ ನೀಡುವರು.
ಅ.11ರ ಬೆಳಗ್ಗೆ 6 ಗಂಟೆಗೆ ಮುಹ್ಯಿದ್ದೀನ್ ರಾತೀಬ್ ಸಅದಿಯ್ಯ ಗ್ರ್ಯಾಂಡ್ ಮಸ್ಜಿದ್‌ನಲ್ಲಿ ನಡೆಯುವುದು. ಉಸ್ತಾದ್ ಮುಹಮ್ಮದ್ ಸಾಲಿಹ್ ಸಅದಿ ನೇತೃತ್ವ ನೀಡುವರು. ಮದನೀಯಂ ಅಬ್ದುಲ್ಲತೀಫ್ ಸಖಾಫಿ ಜೀಲಾನಿ ಸ್ಮರಣಾ ಭಾಷಣ ನಡೆಸುವರು. 10 ಗಂಟೆಗೆ ಸಅದಿಯ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಆಡಿಟೋರಿಯಂನಲ್ಲಿ ನಡೆಯುವ ಅಲೂಮ್ನಿ ಮೀಟ್‌ಗೆ ಹಾಜಿ ಅಬ್ದುಲ್ಲ ಹುಸೈನ್ ಕಡವತ್ ಅಧ್ಯಕ್ಷತೆ ವಹಿಸುವರು. ಅಧ್ಯಕ್ಷ ಸಯ್ಯಿದ್ ಕೆ.ಎಸ್. ಆಟ್ಟಕ್ಕೋಯ ತಂಙಳ್ ಕುಂಬೋಲ್ ಉದ್ಘಾಟಿಸುವರು. ಸಯ್ಯಿದ್ ಫಸಲ್ ತಂಙಳ್ ಕಕ್ಕಾಡ್ ಪ್ರಾರ್ಥನೆ ನಡೆಸುವರು. ಅಹ್ಮದ್ ಶಿರೀನ್ ಉದ್ಮ ವಿಷಯಾವತರಣ ಮಾಡುವರು.
ಅಂದು 11 ಗಂಟೆಗೆ ಸ್ಥಾನ ವಸ್ತ್ರ ವಿತರಣೆ ಸಯ್ಯಿದ್ ಅತಾಉಲ್ಲ ತಂಙಳ್ ಉದ್ಯಾವರ ಅವರ ಪ್ರಾರ್ಥನೆಯೊಂದಿಗೆ ಆರಂಭವಾಗುವುದು. ಸಯ್ಯಿದ್ ಇಂಬಿಚ್ಚಿಕ್ಕೋಯ ತಂಙಳ್ ಅಲ್ ಬುಖಾರಿ ಕೊಯಿಲಾಂಡಿ ಸ್ಥಾನ ವಸ್ತ್ರ ವಿತರಣೆ ಮಾಡುವರು. ತಾಜುಲ್ ಉಲಮಾ ಕಾನ್ಫರೆನ್ಸ್ ಹಾಲ್‌ನಲ್ಲಿ ಪ್ರವಾಸಿ ಮೀಟ್ ಸಯ್ಯಿದ್ ಝೈನಲ್ ಆಬಿದೀನ್ ಅಲ್ ಅಹ್ದಲ್ ಕಣ್ಣವಂ ಅವರ ಅಧ್ಯಕ್ಷತೆಯಲ್ಲಿ ಅಹ್ಮದ್ ಕೆ. ಮಾಣಿಯೂರ್ ಉದ್ಘಾಟಿಸುವರು.
ಮಧ್ಯಾಹ್ನ 2 ಗಂಟೆಗೆ ಸಅದಿ ಸಂಗಮ ನಡೆಯುವುದು. ಎಂ.ಯು.ಎಸ್. ಅಧ್ಯಕ್ಷ ಅಬ್ದುಲ್ಲತೀಫ್ ಸಅದಿ ಅವರ ಅಧ್ಯಕ್ಷತೆಯಲ್ಲಿ ಅಧ್ಯಕ್ಷ ಸಯ್ಯಿದ್ ಕೆ.ಎಸ್. ಆಟ್ಟಕ್ಕೋಯ ತಂಙಳ್ ಕುಂಬೋಲ್ ಉದ್ಘಾಟಿಸುವರು. ಸಯ್ಯಿದ್ ಜಲಾಲುದ್ದೀನ್ ಸಅದಿ ಕೊನ್ನಾರ ಪ್ರಾರ್ಥನೆ ನಡೆಸುವರು. ಸಅದುಲ್ ಉಲಮಾ ಎ.ಪಿ. ಅಬ್ದುಲ್ಲ ಮುಸ್ಲಿಯಾರ್ ಮಾಣಿಕ್ಕೋತ್, ಕೆ.ಕೆ. ಹುಸೈನ್ ಬಾಖವಿ ವಯನಾಡ್ ನಸೀಹತ್ ನಡೆಸುವರು. ಉಬೈದುಲ್ಲಾಹಿ ಸಅದಿ ನದವಿ, ಕುಟ್ಟಶ್ಶೇರಿ ಅಬ್ದುಲ್ಲ ಬಾಖವಿ, ಅಬ್ದುಲ್ ಹಕೀಂ ಸಅದಿ ಕೊಯ್ಯೋಡ್, ಕೆ.ಕೆ.ಎಂ. ಸಅದಿ ಮಣ್ಣಾರ್ಕಾಡ್, ಮುಹಿಯುದ್ದೀನ್ ಸಅದಿ ಕೊಟ್ಟಕ್ಕರ, ಬಶೀರ್ ಸಅದಿ ವಿರಾಜ್‌ಪೇಟೆ, ಅಶ್ರಫ್ ಸಅದಿ ಮಲ್ಲೂರ್ ಅವರು ಭಾಷಣ ಮಾಡುವರು.
ಸಂಜೆ 4.15ಕ್ಕೆ ಖತಂ ದುಆ ಪ್ರಾರ್ಥನೆಗೆ ಸಯ್ಯಿದ್ ಇಬ್ರಾಹೀಂ ಪೂಕ್ಕುಂಜಿ ತಂಙಳ್ ಕಲ್ಲಕಟ್ಟ ನೇತೃತ್ವ ನೀಡುವರು. 5 ಗಂಟೆಗೆ ಸ್ಮರಣಾ ಸನದ್ ದಾನ ಸಮಾರೋಪ ಸಮ್ಮೇಳನ ಸಯ್ಯಿದ್ ಅಲಿ ಬಾಫಖಿ ತಂಙಳ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಗುವುದು. ಸಯ್ಯಿದ್ ಕೆ.ಎಸ್. ಆಟ್ಟಕ್ಕೋಯ ತಂಙಳ್ ಕುಂಬೋಲ್ ಅವರ ಅಧ್ಯಕ್ಷತೆಯಲ್ಲಿ ಸಮಸ್ತ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸುವರು.
ಎ.ಪಿ. ಅಬ್ದುಲ್ಲ ಮುಸ್ಲಿಯಾರ್ ಮಾಣಿಕ್ಕೋತ್ ಸನದ್ ದಾನ ಭಾಷಣ ಮತ್ತು ಸಯ್ಯಿದ್ ಇಬ್ರಾಹೀಮುಲ್ ಖಲೀಲ್ ಅಲ್ ಬುಖಾರಿ ಮುಖ್ಯ ಭಾಷಣ ನಡೆಸುವರು. ಸಯ್ಯಿದ್ ಅನ್ವರ್ ಸಾದಾತ್ ಸಅದಿ ಅಲ್ ಅರ್ಶದಿ ನಡುಪಟ್ಟಂ ಭಾಷಣ ಮಾಡುವರು. ಹಸ್ಸನ್ ಮುಸ್ಲಿಯಾರ್ ವಯನಾಡ್, ಕೆ.ಕೆ. ಹುಸೈನ್ ಬಾಖವಿ, ಕೆ.ಪಿ. ಅಬೂಬಕರ್ ಮುಸ್ಲಿಯಾರ್ ಪಟ್ಟುವಂ, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಪರಿಯಾರಂ, ಮುಹಮ್ಮದ್ ಅಲಿ ಸಖಾಫಿ ತೃಕ್ಕರಿಪ್ಪೂರ್, ಸಯ್ಯಿದ್ ಹಸನುಲ್ ಅಹ್ದಲ್, ಸಯ್ಯಿದ್ ತ್ವಾಹ ಬಾಫಖಿ ಕುಂಬೋಲ್, ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್, ಬಿ.ಎಸ್. ಅಬ್ದುಲ್ಲಕುಂಜಿ ಫೈಝಿ, ಕಲ್ಲಟ್ರ ಮಾಯಿನ್ ಹಾಜಿ ಎಂಎಲ್ಎ, ಹನೀಫ್ ಹಾಜಿ ಉಳ್ಳಾಳ್ ಮುಂತಾದವರು ಭಾಷಣ ಮಾಡುವರು.
ಕಾರ್ಯದರ್ಶಿ ಕೆಪಿ ಹುಸೈನ್ ಸಅದಿ ಕೆ.ಸಿ. ರೋಡ್ ಸ್ವಾಗತ ಮತ್ತು ಸ್ವಾಗತ ಸಂಘದ ಕನ್ವೀನರ್ ಕೊಲ್ಲಂಪಾಡಿ ಅಬ್ದುಲ್ ಖಾದಿರ್ ಸಅದಿ ವಂದನೆ ಸಲ್ಲಿಸುವರು.
ಜಾಮಿಅ ಸಅದಿಯ್ಯದ ಕಾರ್ಯಕ್ಷೇತ್ರದಲ್ಲಿ ಸಕ್ರಿಯ ಸಾನ್ನಿಧ್ಯವಾಗಿದ್ದ ಹಾಗೂ ದಅವಾ ಮತ್ತು ಜೀವಕಾರುಣ್ಯ ಕಾರ್ಯಗಳಲ್ಲಿ ಪ್ರವಾಸ ಜೀವನದಲ್ಲಿಯೂ ಸಕ್ರಿಯ ನಾಯಕತ್ವ ವಹಿಸಿದ್ದ ಚೆರುಂಬ ಸಿಪಿ ಅಬ್ದುಲ್ಲ ಹಾಜಿಗೆ ಮರ್ಹೂಮ್ ಕಲ್ಲಟ್ರ ಅಬ್ದುಲ್ ಖಾದರ್ ಹಾಜಿ ಸ್ಮಾರಕ ಪ್ರಶಸ್ತಿಯನ್ನು ನೀಡಲಾಗುವುದು. ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಮುಂಬೈಯಲ್ಲಿಯೂ ನಾಡಿನಲ್ಲಿಯೂ ಸಅದಿಯ್ಯದ ಕಾರ್ಯಕ್ಷೇತ್ರಗಳಲ್ಲಿ ಶ್ಲಾಘನೀಯ ಸೇವೆ ಸಲ್ಲಿಸುತ್ತಿರುವ ಶಾಫಿ ಹಾಜಿ ಕೀಝೂರ್, ಅಬ್ದುಲ್ ರಝಾಕ್ ಹಾಜಿ ಮೇಲ್ಪರಂಬ್ ಅವರನ್ನು ಸಮಾರೋಪ ವೇದಿಕೆಯಲ್ಲಿ ಸನ್ಮಾನಿಸಲಾಗುವುದು.
ಪಿ.ಎಸ್. ಆಟ್ಟಕ್ಕೋಯ ತಂಙಳ್ ಬಾಹಸನ್ ಪಂಜಿಕ್ಕಲ್ (ಅಧ್ಯಕ್ಷರು, ಸ್ವಾಗತ ಸಂಘ), ಕೊಲ್ಲಂಪಾಡಿ ಅಬ್ದುಲ್ ಖಾದಿರ್ ಸಅದಿ (ಕನ್ವೀನರ್, ಸ್ವಾಗತ ಸಂಘ), ಪಳ್ಳಂಕೋಡ್ ಅಬ್ದುಲ್ ಖಾದಿರ್ ಮದನಿ (ಅಧ್ಯಕ್ಷರು, ಕಾರ್ಯಕ್ರಮ), ಎಂಎ ಅಬ್ದುಲ್ ವಹಾಬ್ ತೃಕ್ಕರಿಪ್ಪೂರ್ (ಸ್ವೀಕಾರ, ಕಾರ್ಯಕ್ರಮ), ಸಯ್ಯಿದ್ ಜಾಫರ್ ಸ್ವಾದಿಖ್ ಸಅದಿ ಮಾಣಿಕ್ಕೋತ್ (ಅಧ್ಯಕ್ಷರು, ಪ್ರಚಾರ), ಇಸ್ಮಾಈಲ್ ಸಅದಿ ಪಾರಪ್ಪಳ್ಳಿ (ಕನ್ವೀನರ್, ಪ್ರಚಾರ) ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.