ಕನಕಗಿರಿ | ಕುರಿ, ಆಡು ಕಳ್ಳತನ : ಐವರು ಆರೋಪಿಗಳ ಬಂಧನ
Update: 2026-08-09 23:04 IST
ಸಾಂದರ್ಭಿಕ ಚಿತ್ರ | PC : AI
ಕನಕಗಿರಿ: ತಾಲೂಕಿನ ಹುಲಸನಹಟ್ಟಿ ಮತ್ತು ಮುಸಲಾಪೂರ ಗ್ರಾಮಗಳಲ್ಲಿ ಕಳೆದ 2-3 ತಿಂಗಳಿಂದ ನಡೆದಿದ್ದ ಕುರಿ ಮತ್ತು ಆಡುಗಳ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರಿನ ಭೀಮೇಶ ಸಣ್ಣ ಸಿದ್ದಪ್ಪ ಭಜಂತ್ರಿ, ಸುರೇಶ ಸಣ್ಣ ಶ್ಯಾಮಣ್ಣ ಭಜಂತ್ರಿ, ಮಲ್ಲಿಕಾರ್ಜುನ ನಾಗರಾಜ ಭಜಂತ್ರಿ. ರಮೇಶ ಸಣ್ಣ ಶ್ಯಾಮಣ್ಣ ಭಜಂತ್ರಿ ಹಾಗೂ ಕನಕಗಿರಿ ತಾಲೂಕಿನ ನೀರಲೂಟಿಯ ಹುಸೇನಬಾಷಾ ಹೊನ್ನೂರಸಾಬ ವಾಲಿಕಾರ ಬಂಧಿತ ಆರೋಪಿಗಳು.
ಶನಿವಾರ ಬೆಳಿಗ್ಗೆ ತಾವರಗೇರಾ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಆರೋಪಿ ಭೀಮೇಶನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಈ ಜಾಲ ಬಯಲಾಗಿದೆ.
ಆರೋಪಿಗಳಿಂದ 1,80 ಲಕ್ಷ ರೂಪಾಯಿ ಮೌಲ್ಯದ 5 ಕುರಿ, 2 ಟಗರು, 3 ಆಡು ಕೃತ್ಯಕ್ಕೆ ಬಳಸಿದ ಒಂದು ಬೊಲೆರೋ ವಾಹನ ಮತ್ತು 3 ಬಜಾಜ್ ಪಲ್ಸರ್ ಬೈಕ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ .