Kanakagiri | ಚಿತ್ರಕಲಾ ಸ್ಪರ್ಧೆ : ತಿಂಗಳುಗಳ ಬಳಿಕ ಬಂತು 10 ಸಾವಿರ ಬಹುಮಾನ !
Update: 2026-08-06 22:01 IST
ಕನಕಗಿರಿ : ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ 2025ರ ನವೆಂಬರ್‌ನಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ವಿದ್ಯಾರ್ಥಿನಿ ಮಧುಶ್ರೀ ಸಮಗಂಡಿ ಅವರಿಗೆ ಬಹುಮಾನ ವಿತರಿಸಲು ಇಲಾಖೆ ಕ್ರಮ ಕೈಗೊಂಡಿದೆ.
ಸ್ಪರ್ಧೆ ನಡೆದ ಸುಮಾರು ಆರೇಳು ತಿಂಗಳು ಕಳೆದರೂ ವಿಜೇತೆಗೆ 10 ಸಾವಿರ ರೂ. ಬಹುಮಾನದ ಚೆಕ್ ವಿತರಿಸದಿರುವ ಕುರಿತು ಮೇ ತಿಂಗಳಲ್ಲಿ ‘ವಾರ್ತಾ ಭಾರತಿ’ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು.
ವರದಿಯ ಬಳಿಕ ಸಮಾಜ ಕಲ್ಯಾಣ ಇಲಾಖೆ ಮಧುಶ್ರೀ ಅವರ ಹೆಸರಿನಲ್ಲಿ 10 ಸಾವಿರ ರೂ. ಚೆಕ್ ಸಿದ್ಧಪಡಿಸಿದ್ದು, ಕಚೇರಿಗೆ ಆಗಮಿಸಿ ಚೆಕ್ ಪಡೆದುಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.