ಕನಕಗಿರಿ | ಕನಕದಾಸರ ವಿಚಾರಧಾರೆಗಳು ಸರ್ವಕಾಲಿಕ: ಚಂದ್ರಶೇಖರ ಗಾಳಿ
ಕನಕಗಿರಿ: ಇಲ್ಲಿನ ತಾಲೂಕು ಆಡಳಿತ ಹಾಗೂ ಹಾಲುಮತ ಕುರುಬ ಸಮಾಜದ ವತಿಯಿಂದ ಭಕ್ತ ಕನಕದಾಸರ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು. ಬಳಿಕ ಮಾತನಾಡಿದ ತಹಶೀಲ್ದಾರ್ ಚಂದ್ರಶೇಖರ ಗಾಳಿ, ಕನಕದಾಸರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಮ್ಮ ಕೀರ್ತನೆಗಳ ಮೂಲಕ ತಿದ್ದುವ ಪ್ರಯತ್ನ ಮಾಡಿದರು. ಸಾಮಾಜಿಕ ಅಸಮಾನತೆ, ಅನ್ಯಾಯ ಹಾಗೂ ಶೋಷಣೆಯ ವಿರುದ್ಧ ಹೋರಾಟ ನಡೆಸಿದ ಮಹಾನ್ ಸಂತರು ಎಂದು ಸ್ಮರಿಸಿದರು.
ಕನಕದಾಸರ ವಿಚಾರಧಾರೆಗಳು ಸರ್ವಕಾಲಿಕವಾಗಿದ್ದು, ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಕನಕದಾಸರು ಸೇರಿದಂತೆ ಇತರ ಮಹಾನ್ ವ್ಯಕ್ತಿಗಳನ್ನು ಯಾವುದೇ ಒಂದು ಸಮಾಜಕ್ಕೆ ಸೀಮಿತಗೊಳಿಸಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂಎಸ್‌ಎಂಎಲ್ ನಿಗಮದ ನಿರ್ದೇಶಕ ಕೆ. ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶ ಸಮಗಂಡಿ, ಕುರುಬ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಸಿದ್ದಪ್ಪ ನೀರ್ಲೂಟಿ, ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಶೇಖರ, ಸಿಡಿಪಿಒ ವಿಜಯಲಕ್ಷ್ಮೀ ಹಿರೇಮಠ, ದಲ್ಲಾಳಿ ವರ್ತಕರ ಸಂಘದ ಅಧ್ಯಕ್ಷ ಮಹಾಂತೇಶ ಸಜ್ಜನ್, ತಾಲೂಕು ಕುರುಬ ಸಮಾಜದ ಅಧ್ಯಕ್ಷ ನಾಗಪ್ಪ ಹುಗ್ಗಿ, ಹಾಲುಮತ ಮಹಾಸಭಾದ ಅಧ್ಯಕ್ಷ ಜಡಿಯಪ್ಪ ಮುಕ್ಕುಂದಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹೊನ್ನೂರುಸಾಬ ಮೇಸ್ತ್ರೀ ಹಾಗೂ ಬಸಂತಗೌಡ ಪಾಟೀಲ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕಂಠರಂಗ ನಾಯಕ, ಸದಸ್ಯರಾದ ಶರಣೆಗೌಡ ಪಾಟೀಲ, ರಾಕೇಶ ಕಂಪ್ಲಿ, ರಾಜಾಸಾಬ ನಂದಾಪುರ, ಸಿದ್ದಾರ್ಥಕುಮಾರ, ಗಂಗಾಧರ ಚೌಡ್ಕಿ, ಶಾಂತಪ್ಪ ಬಸರಿಗಿಡ, ಹನುಮೇಶ ಹಡಪದ, ಆಶ್ರಯ ಸಮಿತಿ ಸದಸ್ಯರಾದ ಕನಕಪ್ಪ ವಾಲೇಕಾರ ಹಾಗೂ ಕನಕಪ್ಪ ಮ್ಯಾಗಡೆ, ನಗರ ಕಾಂಗ್ರೆಸ್ ಅಧ್ಯಕ್ಷ ರವಿ ಪಾಟೀಲ, ಪ್ರಮುಖರಾದ ಅಶೋಕ ಜಾಡಿ, ಸಣ್ಣೆಪ್ಪ ಸಿಂಗಾಪುರ, ಹೂವಪ್ಪ ಚೌಡ್ಕಿ, ಪರಸಪ್ಪ ಚೌಡ್ಕಿ, ಪಾಮಣ್ಣ ಚಳ್ಳಾರಿ, ಹುಲಗಪ್ಪ ಚೌಡ್ಕಿ, ಶರಣಪ್ಪ ಚೌಡ್ಕಿ, ದುರಗಪ್ಪ ಆರಾಪುರ, ಕನಕಪ್ಪ ತಳವಾರ, ಗ್ಯಾನಪ್ಪ ಗಾಣದಾಳ, ನಿಂಗಪ್ಪ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.