ಕಾರಟಗಿ | ಸಚಿವ ಶಿವರಾಜ ತಂಗಡಗಿಯಿಂದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ
ಕುರ್ಚಿಗಾಗಿ ಯಾವುದೇ ಶಾಸಕರ ಸಹಿ ನಡೆದಿಲ್ಲ : ಸಚಿವ ಶಿವರಾಜ ತಂಗಡಗಿ
ಕಾರಟಗಿ : ಸಿಎಂ ಕುರ್ಚಿಗಾಗಿ ಯಾವುದೇ ಶಾಸಕರ ಸಹಿ ಸಂಗ್ರಹ ನಡೆದಿಲ್ಲ. ಅದೆಲ್ಲಾ ಬಿಜೆಪಿಯವರ ಸೃಷ್ಟಿ ಹೀಗಾಗಿ ಆ ವಿಷಯ ಮಾದ್ಯಮದಲ್ಲಿ ಬರುತ್ತಾ ಇದೆ. ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ತಿಮ್ಮಾಪುರ ಗ್ರಾಮದ ಶ್ರೀ ಗುಡ್ಡದ ಮಲ್ಲಯ್ಯ ಲಕ್ಷ್ಮೀ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಬಿಜೆಪಿಯವರ ಅಧಿಕಾರದ ಅವಧಿಯಲ್ಲಿ ನೂರಾರು ಸಮಸ್ಯೆಗಳು ಉಲ್ಬಣಗೊಂಡು ಶಾಸಕರನ್ನು ಕುದುರೆ ವ್ಯಾಪಾರಕ್ಕೆ ಹಚ್ಚಿದ್ದರು. ಅವರು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಗಟ್ಟಿಯಾಗಿದ್ದಾರೆ. ಜತೆಗೆ ಸಮರ್ಥರಿದ್ದಾರೆ. ಹೀಗಾಗಿ ಯಾವುದೇ ಗಂಭೀರ ಸಮಸ್ಯೆಗಳಿಲ್ಲ ಸಣ್ಣಪುಟ್ಟದಾಗಿ ಮಾತನಾಡುವ ವಿಷಯಗಳಿವೆ. ಈ ಬಗ್ಗೆ ನಮ್ಮ ಹೈಕಮಾಂಡ್ ನಾಯಕರು ಮಾತನಾಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ನವರೇ ಮಾತನಾಡಿ ಹೈಕಮಾಂಡ್ ಹೇಳಿದಂತೆ ನಾವೆಲ್ಲರೂ ಕೇಳುತ್ತೇವೆ ಎಂದು ತಿಳಿಸಿದ್ದಾರೆ. ಹೀಗಾಗಿ ಅದರ ಬಗ್ಗೆ ನಾವು ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ತಿಳಿಸಿದರು.
ಈ ವೇಳೆ ಕ್ಷೇತ್ರದಲ್ಲಿ 1.89 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ದೇವಪ್ಪ ಬಾವಿಕಟ್ಟೆ, ಕಾರಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೆಗೌಡ ಬೂದುಗುಂಪಾ, ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ರಫಿ, ಮುಖಂಡರಾದ ಶಶಿಧರ್ ಗೌಡ, ಕೆ.ಸಿದ್ದನಗೌಡ, ಶರಣೆಗೌಡ ಕೊಂತನೂರು, ವೀರನಗೌಡ, ಶಿವಕುಮಾರ್, ಬಸವರಾಜ ಕಡೆಮನೆ, ಸುರೇಶ್ ಬೆಳ್ಳಿಕಟ್ಟಿ, ಶರಣೆಗೌಡ, ವಿಜಯ ಕುಮಾರ್ ಕೊಲ್ಕರ್ ಸೇರಿ ಇತರರಿದ್ದರು.