×
Ad

Koppal | ಹೃದಯಾಘಾತದಿಂದ ನ್ಯಾಯಾಲಯದ ಆವರಣದಲ್ಲಿ ಕುಸಿದು ಬಿದ್ದು ವಕೀಲ ಮೃತ್ಯು

Update: 2026-05-20 19:31 IST

ಕನಕೇಶ್ ಮುರುಡಿ

ಗಂಗಾವತಿ: ನ್ಯಾಯಾಲಯದ ಆವರಣದಲ್ಲಿ ದಿಢೀರ್ ಕುಸಿದು ಬಿದ್ದ ವಕೀಲರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಮೃತರನ್ನು ಕನಕಗಿರಿ ತಾಲ್ಲೂಕಿನ ಚಿಕ್ಕಮಾದಿಹಾಳ ಗ್ರಾಮದ ಕನಕೇಶ್ ಮುರುಡಿ (26) ಎಂದು ಗುರುತಿಸಲಾಗಿದೆ.

ಎಂದಿನಂತೆ ನ್ಯಾಯಾಲಯದ ಕಲಾಪಗಳಿಗೆ ಆಗಮಿಸಿದ್ದ ಕನಕೇಶ್ ಅವರು ನ್ಯಾಯಾಲಯದ ಆವರಣದಲ್ಲಿ ಇದ್ದಾಗಲೇ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಸಹೋದ್ಯೋಗಿ ವಕೀಲರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರೂ, ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕನಕೇಶ್ ಅವರು ಹಿರಿಯ ವಕೀಲ ಎಚ್‌.ಎಂ.ಮಂಜುನಾಥ್ ಅವರ ಬಳಿ ವೃತ್ತಿ ಅಭ್ಯಾಸ ಮಾಡುತ್ತಿದ್ದರು. ಅವರ ಅಕಾಲಿಕ ನಿಧನಕ್ಕೆ ಗಂಗಾವತಿ ವಕೀಲರ ಸಂಘದ ಪದಾಧಿಕಾರಿಗಳು, ಸಹೋದ್ಯೋಗಿಗಳು ಹಾಗೂ ಆಪ್ತರು ಸಂತಾಪ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News