Kuknoor | 26 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಸುಬೇದಾರ್ ಯಲ್ಲಪ್ಪ ಗುಡಗೇರಿಗೆ ಅದ್ದೂರಿ ಸ್ವಾಗತ

Update: 2026-08-02 23:04 IST

ಕುಕನೂರು: ಭಾರತೀಯ ಸೇನೆಯಲ್ಲಿ 26 ವರ್ಷಗಳ ಕಾಲ ಸುಬೇದಾರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ತಾಲೂಕಿನ ಹೆಮ್ಮೆಯ ಯೋಧ ಯಲ್ಲಪ್ಪ ನಾಗಪ್ಪ ಗುಡಗೇರಿ ಅವರಿಗೆ ಸ್ವಗ್ರಾಮದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.

ಕೊಪ್ಪಳದಿಂದ ಕುಕನೂರು, ಮಂಡಲಗಿರಿ, ಇಟಗಿ, ಮನ್ನಾಪುರ ಹಾಗೂ ಮನ್ನಾಪುರ ತಾಂಡದವರೆಗೆ ನಡೆದ ಮೆರವಣಿಗೆಯಲ್ಲಿ ನೂರಾರು ಗ್ರಾಮಸ್ಥರು, ಯುವಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಹೂಮಾಲೆ ಹಾಕಿ ಅಭಿನಂದಿಸಿದರು. ದೇಶದ ಗಡಿಯನ್ನು 26 ವರ್ಷಗಳ ಕಾಲ ಕಾಪಾಡಿದ ಯೋಧನಿಗೆ ಗ್ರಾಮಸ್ಥರು ಗೌರವ ಸಲ್ಲಿಸಿ ಕೃತಜ್ಞತೆ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಬುಡ್ಡೆಸಾಬ ನಾಯಕ ಉದ್ಘಾಟಿಸಿದರು. ಪ್ರವೀಣ ಬಸವರಾಜ ಬೀಳಗಿ ಅಧ್ಯಕ್ಷತೆ ವಹಿಸಿದ್ದರು. ನೀಲಪ್ಪ ಕಡೆಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ಯಲ್ಲಪ್ಪ ಗುಡಗೇರಿ ಅವರ ದೇಶಸೇವೆ ಯುವಜನತೆಗೆ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯಲ್ಲಪ್ಪ ನಾಗಪ್ಪ ಗುಡಗೇರಿ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶರಣಪ್ಪ ಮಾಸ್ತಾರ ವೀರಾಪೂರ, ವೀರಪ್ಪ ಜಾಗರಿ, ನಾಗರಾಜ ಚಿಕ್ಕೇನಕೊಪ್ಪ, ನಾಗರಾಜ ವೆಂಕಟಾಪೂರ, ಸಂಗಪ್ಪ ಗೊಂಡಿ, ಶಿವಾನಂದಪ್ಪ ಜೀವಣ್ಣವರ, ಕನಕರಾಯ ತಳವಾರ, ಈರಣ್ಣ ಸಜ್ಜನ, ಮಲ್ಲಪ್ಪ ಕೆರಳ್ಳಿ, ದೇವೇಂದ್ರಪ್ಪ ವೆಂಕಟಾಪೂರ, ಶರಣಪ್ಪ ಹೆಚ್. ಹಳ್ಳಿ, ಅಂಗಪ್ಪ ಹಡಪದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರವೀಂದ್ರ ರಾಜೂರು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ “ಜೈ ಹಿಂದ್” ಹಾಗೂ “ವಂದೇ ಮಾತರಂ” ಘೋಷಣೆಗಳೊಂದಿಗೆ ವೀರಯೋಧರಿಗೆ ಗೌರವ ಸಲ್ಲಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News