×
Ad

ಬಾಗೇಪಲ್ಲಿ: ಕಸದ ತೊಟ್ಟಿ ಬಳಿ ನವಜಾತ ಗಂಡು ಮಗುವಿನ ಮೃತದೇಹ ಪತ್ತೆ

Update: 2024-03-14 18:15 IST

ಬಾಗೇಪಲ್ಲಿ: ತಾಲೂಕಿನ ಮಿಟ್ಟೇಮರಿ ಹೋಬಳಿ ಕಾನಗಮಾಕಲಪಲ್ಲಿ ಗ್ರಾಮದ ಕಾಲೋನಿಯೊಂದರಲ್ಲಿ ಹಿಂಭಾಗದ ಕಸದಲ್ಲಿ ನವಜಾತ ಗಂಡು ಮಗುವಿನ ಮೃತ ದೇಹ ಕಂಡುಬಂದಿದ್ದು ವರದಿಯಾಗಿದೆ.

ಸುದ್ದಿ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರ ಮೇರೆಗೆ ಶಿಶುವಿನ ಮೃತ ದೇಹವನ್ನು ಪರಿಶೀಲಿಸುತ್ತಿದ್ದು, ಸ್ಥಳಿಯರು ಅಥವಾ ಬೇರೆ ಊರುಗಳಿಂದ ಮಗುವನ್ನು ಕಸದಲ್ಲಿ ಬಿಸಾಕಿ ಹೋಗಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮಗುವಿನ ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಇಟ್ಟಿದ್ದು, ತನಿಖೆ ಪೂರ್ಣಗೊಂಡ ನಂತರ ಸತ್ಯಾಂಶ ಹೊರಬೀಳಿಲಿದೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News