ಭಾಗ್ಯನಗರ | ಆಹಾರದಲ್ಲಿ ವಿಷ ಮಿಶ್ರಣ; ಮೂವರ ಸ್ಥಿತಿ ಗಂಭೀರ, ಇಬ್ಬರ ಬಂಧನ
Update: 2025-11-14 23:52 IST
ಭಾಗ್ಯನಗರ(ಬಾಗೇಪಲ್ಲಿ) : ಒಂದೇ ಕುಟುಂಬದ 8 ಮಂದಿಗೆ ಆಹಾರಕ್ಕೆ ವಿಷ ಬೆರೆಸಿ ಕೊಲೆಗೆ ಯತ್ನಿಸಿರುವ ಘಟನೆ ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ನಡೆದಿದ್ದು, ಘಟನೆಯಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಅಸ್ವಸ್ಥಗೊಂಡವರನ್ನು ಬಾಗೇಪಲ್ಲಿ ತಾಲೂಕು ಪರಗೋಡು ಪಂಚಾಯತ್ ವ್ಯಾಪ್ತಿಯ ದೇವಿರೆಡ್ಡಿಪಲ್ಲಿ ಗ್ರಾಮದ ಮದ್ದಿರೆಡ್ಡಿ, ಭಾಗ್ಯಮ್ಮ, ಮಂಜುನಾಥ, ಈಶ್ವರಮ್ಮ, ಸುಬ್ರಮಣಿ, ಮಣಿ, ಬಾನು, ಈಶ್ವರಮ್ಮ ಎಂದು ಗುರುತಿಸಲಾಗಿದೆ. ಆರೋಪಿಗಳಾದ ದೇವರೆಡ್ಡಿಪಲ್ಲಿ ಗ್ರಾಮದ ಚೌಡರೆಡ್ಡಿ ಮತ್ತು ಪಾಪಿರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಸ್ವಸ್ಥಗೊಂಡವರು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.