ಮನೋಜ್ ಆಝಾದ್-ಅನಿತಾ
ಸಂವಿಧಾನ ಪೀಠಿಕೆ ಓದುವ ಮೂಲಕ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ
Update: 2025-08-24 20:57 IST
ಬೆಂಗಳೂರು, ಆ. 24 : ಸಂವಿಧಾನ ಪೀಠಿಕೆ ಓದುವ ಮುಖಾಂತರ ‘ವಾರ್ತಾಭಾರತಿ’ ದಿನಪತ್ರಿಕೆಯ ವರದಿಗಾರ ಮನೋಜ್ ಆಝಾದ್ ಹಾಗೂ ನ್ಯಾಯವಾದಿ ಅನಿತಾ ವೈವಾಹಿಕ ಜೀವನಕ್ಕೆ ರವಿವಾರ ಪಾದಾರ್ಪಣೆ ಮಾಡಿದರು.
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸ್ಫೂರ್ತಿಧಾಮದಲ್ಲಿ ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ, ಚಿಂತಕಿ ವಿಜಯಮ್ಮ ಅವರು ಸಂವಿಧಾನ ಪೀಠಿಕೆಯನ್ನು ಓದಿಸಿದರು. ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು, ಹೋರಾಟಗಾರರು ನವ ದಂಪತಿಗೆ ಶುಭಾ ಕೋರಿದರು.