ಕೊಂಥೌಜಮ್ ಗೋವಿಂದಾಸ್ | Photo Credit : PTI 

ಗುವಾಹತಿ, ಸೆ. 7: ಮಣಿಪುರದಲ್ಲಿ ಇಲ್ಲಿಯವರೆಗೆ ಮ್ಯಾನ್ಮಾರ್ ನ 24,475 ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಾಗಿದೆ ಎಂದು ಮಣಿಪುರದ ಗೃಹ ಸಚಿವ ಕೊಂಥೌಜಮ್ ಗೋವಿಂದಾಸ್ ಸೋಮವಾರ ವಿಧಾನಸಭೆಗೆ ತಿಳಿಸಿದರು.

ಇದೇ ವೇಳೆ, ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (NRC) ಜಾರಿಗೆ 1951 ಅನ್ನು ಮೂಲ ವರ್ಷವಾಗಿ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಅಕ್ರಮ ವಲಸಿಗರ ಕುರಿತು ವಿರೋಧ ಪಕ್ಷದ ಶಾಸಕ ಲೋಕೇಶ್ವರ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಗೋವಿಂದಾಸ್, ರಾಜ್ಯದಲ್ಲಿ ಮ್ಯಾನ್ಮಾರ್ ನ 24,475 ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಾಗಿದೆ. ಅವರಲ್ಲಿ 14,992 ಮಂದಿಯನ್ನು ಮ್ಯಾನ್ಮಾರ್ ಗೆ ವಾಪಸ್ ಕಳುಹಿಸಲಾಗಿದೆ ಎಂದು ಹೇಳಿದರು.

ಈ ವಲಸಿಗರು ಕಮ್ಜಾಂಗ್, ತೆಂಗ್ನೌಪಾಲ್ ಮತ್ತು ಚಾಂದೇಲ್ ಎಂಬ ಮೂರು ಗಡಿ ಜಿಲ್ಲೆಗಳ ಮೂಲಕ ಪ್ರವೇಶಿಸಿದ್ದಾರೆ ಎಂದು ಅವರು ತಿಳಿಸಿದರು.

ಈ ನಡುವೆ, ಕಾಂಗ್ರೆಸ್ ಶಾಸಕ ಕೆ. ಮೇಘಚಂದ್ರ ಸಿಂಗ್ ಎತ್ತಿದ ಪ್ರಶ್ನೆಗೆ ಉತ್ತರಿಸಿದ ಗೋವಿಂದಾಸ್, ರಾಜ್ಯ ವಿಧಾನಸಭೆ ಅಂಗೀಕರಿಸಿದ ನಿರ್ಣಯಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರ NRC ವಿಚಾರವನ್ನು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor