ನಿತಿನ್ ಗಡ್ಕರಿ | Photo Credit : PTI 

ನಾಗ್ಪುರ, ಸೆ. 7: ತಾನು ನಾಗ್ಪುರದ ಸುಶಿಕ್ಷಿತ ವಲಯಗಳಿಗಿಂತ ಹೆಚ್ಚಿನ ಮತಗಳನ್ನು ಅಪರಾಧಿಗಳು, ಭೂಗತ ಜಗತ್ತು ಮತ್ತು ವೇಶ್ಯಾವಾಟಿಕೆಯೊಂದಿಗೆ ಗುರುತಿಸಿಕೊಂಡಿರುವ ಪ್ರದೇಶಗಳಿಂದ ಗಳಿಸಿದ್ದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಹೇಳಿದ್ದಾರೆ.

ನಾಗ್ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತನಗೆ ಸಮಾಜದ ವಿವಿಧ ವರ್ಗಗಳ ಜನರೊಂದಿಗೆ ಒಡನಾಟವಿದೆ, ಆದರೆ ಇದನ್ನು ಯಾವುದೇ ಕಾರಣಕ್ಕೂ ಕ್ರಿಮಿನಲ್ ಚಟುವಟಿಕೆಗಳಿಗೆ ನೀಡುವ ಬೆಂಬಲವೆಂದು ಭಾವಿಸಬಾರದು ಎಂದು ಸ್ಪಷ್ಟಪಡಿಸಿದರು.

ತನ್ನ ಕ್ಷೇತ್ರದಲ್ಲಿಯ ಮತದಾನದ ಮಾದರಿಯನ್ನು ವಿವರಿಸಿದ ಅವರು, ಹೆಚ್ಚು ಶಿಕ್ಷಣ ಪಡೆದ ನಾಗರಿಕರ ವಲಯದಲ್ಲಿ ಶೇ.70ರಿಂದ 75ರಷ್ಟು ಮತಗಳು ಸಿಕ್ಕರೆ, ಅಪರಾಧ ಚಟುವಟಿಕೆಗಳು ಮತ್ತು ರೆಡ್ಲೈಟ್ ಪ್ರದೇಶಗಳೆಂದು ಗುರುತಿಸಲ್ಪಟ್ಟ ಬಡಾವಣೆಗಳಲ್ಲಿ ಸುಮಾರು ಶೇ.92ರಷ್ಟು ಮತಗಳು ಲಭಿಸಿವೆ ಎಂದು ಬಹಿರಂಗಗೊಳಿಸಿದರು.

ಈ ನಿರ್ದಿಷ್ಟ ಪ್ರದೇಶಗಳಲ್ಲಿ ತನಗೆ ಸಿಕ್ಕಿರುವ ಭಾರೀ ಬೆಂಬಲಕ್ಕೆ ಅಲ್ಲಿ ತಾನು ಕೈಗೊಂಡ ಅಭಿವೃದ್ಧಿ ಹಾಗೂ ಸಾಮಾಜಿಕ ಕಲ್ಯಾಣ ಕಾರ್ಯಗಳೇ ಕಾರಣ. ಆ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಮತ್ತು ವಿವಿಧ ಸಾಮಾಜಿಕ ಕೆಲಸಗಳನ್ನು ಮಾಡಿದ್ದರಿಂದ ಅಲ್ಲಿನ ಜನತೆ ಬೆಂಬಲ ನೀಡಿದ್ದಾರೆಯೇ ಹೊರತು, ತನಗೂ ಅವರಿಗೂ ಯಾವುದೇ ಅನುಚಿತ ಸಂಬಂಧವಿಲ್ಲ ಎಂದು ಗಡ್ಕರಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor