ಶಿಕ್ಷಣ ಮಂತ್ರಿಯ ರಾಜೀನಾಮೆಗೆ ಗಡುವು ವಿಧಿಸಿದ ಸಿಜೆಪಿ
ಮುಂದಿನ ಶನಿವಾರ ಜಂತರ್-ಮಂತರ್ ನಲ್ಲಿ ಇನ್ನೊಂದು ಬೃಹತ್ ಪ್ರತಿಭಟನೆ
Update: 2026-06-06 21:47 IST
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ | Photo Credit : PTI
ಹೊಸದಿಲ್ಲಿ: ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)ದ ಸ್ಥಾಪಕ ಅಭಿಜಿತ್ ದೀಪ್ಕೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರ ರಾಜೀನಾಮೆಗೆ ಶನಿವಾರ ಸಂಜೆ 5 ಗಂಟೆಯ ಗಡುವು ವಿಧಿಸಿದ್ದಾರೆ. ಸಚಿವರು ರಾಜೀನಾಮೆ ನೀಡಲು ನಿರಾಕರಿಸಿದರೆ ದೇಶವ್ಯಾಪಿ ಪ್ರತಿಭಟನೆಗಳನ್ನು ನಡೆಸಲಾಗುವುದು ಎಂಬ ಎಚ್ಚರಿಕೆಯನ್ನೂ ಅವರು ಈ ಸಂದರ್ಭದಲ್ಲಿ ನೀಡಿದ್ದಾರೆ.
ಮುಂದಿನ ವಾರ ಹಲವು ನಗರಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುವುದು ಹಾಗೂ ಮುಂದಿನ ಶನಿವಾರ ಜಂತರ್-ಮಂತರ್‌ನಲ್ಲಿ ಇನೊಂದು ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ ಎಂದು ಅವರು ಘೋಷಿಸಿದರು.