ರಾಹುಲ್ ಗಾಂಧಿ (Photo: PTI)

ಹೊಸದಿಲ್ಲಿ: “ಸಂವಿಧಾನ ಭಾರತದ ಆತ್ಮವಾಗಿದ್ದು, ಅನ್ಯಾಯದ ವಿರುದ್ಧ ದೊಡ್ಡ ಆಯುಧವಾಗಿದೆ” ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಣ್ಣಿಸಿದ್ದಾರೆ.

'ಸಂವಿಧಾನ ದಿನ' ಅಂಗವಾಗಿ ಗುರುವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಸಂವಿಧಾನ ಭಾರತೀಯ ಪ್ರಜಾಪ್ರಭುತ್ವದ ಬುನಾದಿಯಾಗಿದ್ದು, ಅನ್ಯಾಯದ ವಿರುದ್ಧದ ಆಯುಧವಾಗಿದೆ” ಎಂದು ಹೇಳಿದ್ದಾರೆ.

“ಭಾರತೀಯ ಸಂವಿಧಾನ ಕೇವಲ ಪುಸ್ತಕವಲ್ಲ; ಅದು ದೇಶದ ಆತ್ಮ. ಅದು ಪ್ರತಿಯೊಬ್ಬ ನಾಗರಿಕರ ಘನತೆಯ ಗುರಾಣಿಯಾಗಿದ್ದು, ಪ್ರತಿ ಧ್ವನಿಯ ಹಿಂದಿನ ಸಾಮರ್ಥ್ಯವಾಗಿದೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಪೋಷಕನಾಗಿದೆ” ಎಂದು ಅವರು ಬರೆದುಕೊಂಡಿದ್ದಾರೆ.

“ಸಂವಿಧಾನ ದಿನದಂದು ಎಂತಹುದೇ ಸನ್ನಿವೇಶದಲ್ಲೂ ಪ್ರತಿ ಭಾರತೀಯರ ಹಕ್ಕನ್ನು ರಕ್ಷಿಸಲು ಹೋರಾಡುತ್ತೇನೆ ಎಂಬ ಪಣವನ್ನು ಪುನರುಚ್ಚರಿಸುತ್ತಿದ್ದೇನೆ. ಸಂವಿಧಾನ ಚಿರಾಯುವಾಗಲಿ, ಭಾರತ ಚಿರಾಯುವಾಗಲಿ” ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಸಂವಿಧಾನದ ಪ್ರಧಾನ ಆದರ್ಶಗಳನ್ನು ರಕ್ಷಿಸುವುದು ರಾಷ್ಟ್ರೀಯ ಹೊಣೆಗಾರಿಕೆಯಾಗಿದೆ ಎಂದು ಹೇಳಿರುವ ಅವರು, ದೇಶದ ಜನತೆಗೆ ಸಂವಿಧಾನದ ದಿನದ ಶುಭಾಶಯಗಳನ್ನು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸದಾನಂದ ಗಂಗನಬೀಡು , ವಾರ್ತಾಭಾರತಿ

contributor