ಮಾಜಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ (Photo: PTI) 

ಚೆನ್ನೈ: ಕಾಂಗ್ರೆಸ್ ಪಕ್ಷದ ವಿಶ‍್ವಾಸದ್ರೋಹದ ಕಾರಣಕ್ಕೆ ನಾವು ಇಂಡಿಯಾ ಮೈತ್ರಿಕೂಟದಿಂದ ಹೊರ ಬಂದಿದ್ದೇವೆ ಎಂದು ಘೋಷಿಸಿರುವ ಡಿಎಂಕೆ, ನಮಗೆ ನಿಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಇಲ್ಲ. ನಾವು ನಮ್ಮದೇ ಆದ ಸ್ವತಂತ್ರ ರಾಜಕೀಯ ನೀತಿಯನ್ನು ರೂಪಿಸಿಕೊಳ್ಳುತ್ತೇವೆ ಎಂದೂ ಹೇಳಿದೆ.

ಕಠಿಣ ಶಬ್ದಗಳನ್ನು ಹೊಂದಿರುವ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಡಿಎಂಕೆ, “ಡಿಎಂಕೆ ನೇತೃತ್ವದ ಮೈತ್ರಿಕೂಟ ಪರಾಭವಗೊಳ್ಳಲು ತಮಿಳುನಾಡು ಕಾಂಗ್ರೆಸ್ ಮುಖ್ಯಸ್ಥ ಬಿ.ಮಾಣಿಕಂ ಟ್ಯಾಗೋರ್, ಗಿರೀಶ್ ಚೋದಂಕರ್ ಮತ್ತು ಪ್ರವೀಣ್ ಚಕ್ರವರ್ತಿ ಸೇರಿದಂತೆ ಇನ್ನಿತರ ಕಾಂಗ್ರೆಸ್ ನಾಯಕರು ಕಾರಣ" ಎಂದು ದೂಷಿಸಿದೆ.

ಅವರು ಪದೇ ಪದೇ ನಮ್ಮ ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದರಿಂದ, ಮೈತ್ರಿಕೂಟದ ಒಗ್ಗಟ್ಟಿಗೆ ಹಾಗೂ ಅದರ ಸಾರ್ವಜನಿಕ ವರ್ಚಸ್ಸಿಗೆ ಹಾನಿಯಾಯಿತು ಎಂದು ಡಿಎಂಕೆ ಆರೋಪಿಸಿದೆ.

“ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ ಪರಾಭವಗೊಳ್ಳಲು ಮಾಣಿಕಂ ಟ್ಯಾಗೋರ್, ಗಿರೀಶ್ ಚೋದಂಕರ್ ಹಾಗೂ ಪ್ರವೀಣ್ ಚಕ್ರವರ್ತಿಯಂತಹ ಕೆಲವು ಕಾಂಗ್ರೆಸ್ ನಾಯಕರು ಪ್ರತಿದಿನ ಡಿಎಂಕೆ ವಿರುದ್ಧ ಹೇಳಿಕೆ ನೀಡಿದ್ದೂ ಒಂದು ಕಾರಣ. ಇದರಿಂದಾಗಿ ಮೈತ್ರಿಕೂಟದ ವಿಶ‍್ವಾಸಾರ್ಹತೆ ಮತ್ತು ಒಗ್ಗಟ್ಟು ಸಾರ್ವಜನಿಕ ವಲಯದಲ್ಲಿ ಪ್ರಶ‍್ನೆಗೀಡಾಯಿತು” ಎಂದು ಅದು ದೂರಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor