ಇಳಿದ ಚಿನ್ನದ ದರ; ಇಂದಿನ ದರವೆಷ್ಟು?
ಸಾಂದರ್ಭಿಕ ಚಿತ್ರ (AI Generated)
ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತ ಇನ್ನಷ್ಟು ತೀವ್ರವಾಗಿದ್ದು, ಶೇ 1.3 ರಷ್ಟು ಇಳಿಕೆಯಾಗಿದೆ.
ಜನವರಿಯ ನಂತರ ಭೌಗೋಳಿಕ-ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಚಿನ್ನದ ದರ ಕುಸಿತದ ಹಾದಿಯಲ್ಲಿತ್ತು. ಹಾಗಿದ್ದರೂ, ಆಗಸ್ಟ್ 24ಕ್ಕೆ ಚಿನ್ನದ ದರ ಮಾರ್ಚ್ ನಂತರದ ಅತ್ಯಧಿಕ ಮಟ್ಟಕ್ಕೆ ಏರಿತ್ತು. ಆಮೇಲೆ ಆಗಸ್ಟ್ ಕೊನೆಯ ವಾರದಿಂದ ಚಿನ್ನದ ದರ ಕುಸಿತದ ಹಾದಿಯಲ್ಲಿದೆ. ಅಕ್ಟೋಬರ್ ಮೊದಲ ವಾರವೂ ಕುಸಿತದ ಜೊತೆಗೆ ಮಾರುಕಟ್ಟೆ ಆರಂಭವಾಗಿತ್ತು. ಕಳೆದ ವಾರವಿಡೀ ಕುಸಿತದ ಜೊತೆಗೆ ಸಾಗಿದ್ದ ಮಾರುಕಟ್ಟೆ ಶುಕ್ರವಾರ ಮತ್ತು ಶನಿವಾರ ಏರಿಕೆ ದಾಖಲಿಸಿದೆ. ನಂತರ ಸೋಮವಾರ ಮತ್ತೆ ಕುಸಿತ ದಾಖಲಿಸಿದೆ. ಇದೀಗ ಮಂಗಳವಾರವೂ ಚಿನ್ನದ ದರದಲ್ಲಿ ಕುಸಿತ ದಾಖಲಿಸಿದೆ.
ವಾರಾಂತ್ಯದಲ್ಲಿ ಕುಸಿಯುತ್ತಿದ್ದ ರೂಪಾಯಿ ಮೌಲ್ಯ ಬೆಂಬಲಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತೆಗೆದುಕೊಂಡ ಮಹತ್ವದ ಕ್ರಮಗಳಿಂದಾಗಿ ಭಾರತೀಯ ರೂಪಾಯಿ ಬಲಗೊಂಡಿದೆ. ಪರಿಣಾಮವಾಗಿ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತ ಇನ್ನಷ್ಟು ತೀವ್ರವಾಗಿದ್ದು, ಶೇ 1.3 ರಷ್ಟು ಇಳಿಕೆಯಾಗಿದೆ.
ಚಿನ್ನದ ದರದಲ್ಲಿ ಇಳಿಕೆ
ಅಕ್ಟೋಬರ್ 13ರಂದು ಮಂಗಳವಾರ 11 ಗಂಟೆಯ ವಹಿವಾಟಿನಲ್ಲಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಸೋಮವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 39 ರೂ. ಇಳಿಕೆಯಾಗಿದ್ದು, ಹತ್ತು ಗ್ರಾಂ ಬೆಲೆ 1,49,290 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 35 ರೂ. ಕುಸಿದಿದ್ದು, ಹತ್ತು ಗ್ರಾಂಗೆ 1,36,850 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 29 ರೂ. ಕಡಿಮೆಯಾಗಿ, ಹತ್ತು ಗ್ರಾಂಗೆ 1,11,970 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಅಕ್ಟೋಬರ್ 13ರಂದು ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ದಾಖಲಿಸಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,929 (-39) ರೂ. ರಷ್ಟಕ್ಕೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,685 (-35) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,197 (-29) ರೂ. ಬೆಲೆಗೆ ಬಂದು ನಿಂತಿದೆ.
ಇಳಿದ ಬೆಳ್ಳಿಯ ದರ
ಮಂಗಳೂರಿನಲ್ಲಿ ಜುಲೈ 11ರಿಂದ ಬೆಳ್ಳಿಯ ದರ ಬಹುತೇಕ ಪ್ರತಿ ಕೆಜಿಗೆ 2,35,000 ರೂ.ಗೆ ಸ್ಥಿರವಾಗಿತ್ತು. ಆದರೆ ಆಗಸ್ಟ್ ಆರಂಭದ ವಾರಗಳಲ್ಲಿ ಮತ್ತೆ ಏರಿಕೆಯಾಗಿ ಪ್ರತಿ ಕೆಜಿಗೆ 2,60,000 ರೂ. ವರೆಗೆ ಏರಿತ್ತು. ಆಗಸ್ಟ್ ಕೊನೆ ವಾರದಲ್ಲಿ ಮತ್ತು ಸೆಪ್ಟೆಂಬರ್ ಆರಂಭದಲ್ಲಿ ಬೆಳ್ಳಿಯ ದರ ಕುಸಿದು ಪ್ರತಿ ಕೆಜಿಗೆ 2,45,000 ರೂ.ಗೆ ಬಂದು ನಿಂತಿತ್ತು.
ಸೆಪ್ಟೆಂಬರ್ ನಂತರದ ವಾರಗಳಲ್ಲಿ ಸ್ವಲ್ಪ ಏರಿಳಿತ ಕಂಡರೂ ಮತ್ತೆ ದರ ಕುಸಿದು ಪ್ರತಿ ಕೆಜಿಗೆ 2,45,000 ರೂ.ಗೆ ಬಂದು ಸ್ಥಿರವಾಗಿತ್ತು. ಅಕ್ಟೋಬರ್ 1ರಂದು ಗುರುವಾರ ಪ್ರತಿ ಗ್ರಾಂ ಬೆಳ್ಳಿ ದರ 5 ರೂ. ಇಳಿದು ಪ್ರತಿ ಕೆಜಿಗೆ ಮತ್ತೆ 2,35,000 ರೂ.ಗೆ ಬಂದು ತಲುಪಿದೆ. ಅಂದಿನಿಂದ ಅದೇ ಬೆಲೆಯಲ್ಲಿ ಸ್ಥಿರವಾಗಿತ್ತು. ಕಳೆದ ಶನಿವಾರ ಪ್ರತಿ ಕೆಜಿಗೆ ಮತ್ತೆ 2,40,000 ರೂ.ಗೆ ಬಂದು ತಲುಪಿತ್ತು. ಸೋಮವಾರ ಅದೇ ಬೆಲೆಗೆ ಸ್ಥಿರವಾಗಿತ್ತು. ಇದೀಗ ಮಂಗಳವಾರ ಪ್ರತಿ ಗ್ರಾಂಗೆ 5 ರೂ ಇಳಿದು ಮತ್ತೆ ಪ್ರತಿ ಕೆಜಿಗೆ 2,35,000 ರೂ.ಗೆ ತಲುಪಿದೆ.
ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 14,944 (-38) ರೂ., 22 ಕ್ಯಾರೆಟ್ ಚಿನ್ನದ ದರ 13,700 (-35) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 14,929 (-39) ರೂ., 22 ಕ್ಯಾರೆಟ್ ಚಿನ್ನದ ದರ 13,685 (-35) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 14,934 (-38) ರೂ., 22 ಕ್ಯಾರೆಟ್ ಚಿನ್ನದ ದರ 13,690 (-35) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 14,929 (-39) ರೂ., 22 ಕ್ಯಾರೆಟ್ ಚಿನ್ನದ ದರ 13,685 (-35) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 14,929 (-39) ರೂ., 22 ಕ್ಯಾರೆಟ್ ಚಿನ್ನದ ದರ 13,685 (-35) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 14,929 (-39) ರೂ., 22 ಕ್ಯಾರೆಟ್ ಚಿನ್ನದ ದರ 13,685 (-35) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 14,944 (-38) ರೂ., 22 ಕ್ಯಾರೆಟ್ ಚಿನ್ನದ ದರ 13,700 (-35) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 14,944 (-38) ರೂ., 22 ಕ್ಯಾರೆಟ್ ಚಿನ್ನದ ದರ 13,700 (-35) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 14,944 (-38) ರೂ., 22 ಕ್ಯಾರೆಟ್ ಚಿನ್ನದ ದರ 13,700 (-35) ರೂ.
ಕೊಚ್ಚಿ: 24 ಕ್ಯಾರೆಟ್ ಚಿನ್ನದ ದರ 14,929 (-39) ರೂ., 22 ಕ್ಯಾರೆಟ್ ಚಿನ್ನದ ದರ 13,685 (-35) ರೂ.