ಚೀನಾದ ಶಂಕಿತ ಗೂಢಾಚಾರಿಣಿಯೊಂದಿಗೆ Nvidia ಸಿಇಒ ವಿವಾಹೇತರ ಸಂಬಂಧದ ಬಗ್ಗೆ ಎಫ್‌ಬಿಐ ತನಿಖೆ: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: Nvidia ಸಿಇಒ ಜೆನ್ಸನ್ ಹುವಾಂಗ್, ಚೀನಾದ ಗುಪ್ತಚರ ಸಂಸ್ಥೆಯ ಪರವಾಗಿ ಕೆಲಸ ಮಾಡುತ್ತಿದ್ದಾರೆಂದು ಶಂಕಿಸಲಾದ ಮಹಿಳೆಯೊಬ್ಬಯೊಂದಿಗಿನ ವಿವಾಹೇತರ ಸಂಬಂಧದ ಕುರಿತು ಎಫ್‌ಬಿಐ ನಡೆಸುತ್ತಿರುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ.
ವೈಟ್‌ಹೌಸ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯವಾಗಿ ಜೆನ್ಸನ್ ಹುವಾಂಗ್ ಅವರೊಂದಿಗೆ ಚರ್ಚಿಸಿದ್ದೇನೆ. ಆ ಮಹಿಳೆ ಚೀನಾದ ಏಜೆಂಟ್ ಎಂಬುದು ತಮಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದು, ತಾವು ನಂಬುವುದಾಗಿ ತಿಳಿಸಿದ್ದಾರೆ.
'ನನಗೆ ಜೆನ್ಸನ್ ಚೆನ್ನಾಗಿ ಗೊತ್ತು. ಅವರು ತುಂಬಾ ಗೌರವಾನ್ವಿತ ವ್ಯಕ್ತಿ. ಉತ್ತಮ ಕಂಪನಿಯೊಂದನ್ನು ಕಟ್ಟಿದ್ದಾರೆ' ಎಂದು ಹುವಾಂಗ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಮುಂದಿನ ವಾರ ಚೀನಾದ ಶೆನ್‌ಜೆನ್‌ನಲ್ಲಿ ನಡೆಯಲಿರುವ 'ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ' (ಎಪಿಇಸಿ) ಶೃಂಗಸಭೆಯಲ್ಲಿ ಟ್ರಂಪ್ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಆದರೆ, ಈ ವಿಷಯವನ್ನು ಅವರ ಮುಂದೆ ಪ್ರಸ್ತಾಪಿಸುವ ಬಗ್ಗೆ ಯಾವುದೇ ಸ್ಪಷ್ಟ ನಿಲುವು ವ್ಯಕ್ತಪಡಿಸಲಿಲ್ಲ.
ಕ್ಷಮೆಯಾಚಿಸಿದ ಜೆನ್ಸನ್ ಹುವಾಂಗ್
ಜೆನ್ಸನ್ ಹುವಾಂಗ್, ಈ ಸಂಬಂಧ ಕ್ಷಮೆಯಾಚಿಸಿದ್ದಾರೆ. ತಮ್ಮ ಉದ್ಯೋಗಿಗಳಿಗೆ ಇಮೇಲ್ ಮಾಡಿ, ತನ್ನ ಕುಟುಂಬ ಹಾಗೂ ಎಲ್ಲಾ ಉದ್ಯೋಗಿಗಳಿಗೆ ಕ್ಷಮೆ ಕೇಳುತ್ತೇನೆ. ಜೊತೆಗೆ ತನಿಖೆಗೂ ಸಹಕರಿಸುವುದಾಗಿಯೂ ಹೇಳಿದ್ದಾರೆ.
ಈ ಮಧ್ಯೆ ಹುವಾಂಗ್ ಅವರನ್ನು ಸಿಲುಕಿಸಲು ಪ್ರಯತ್ನ ನಡೆಸಿದ್ದೆವು ಎಂಬ ಆರೋಪವನ್ನು ಚೀನಾ ನಿರಾಕರಿಸಿದೆ. ಗೂಢಚಾರ ಆರೋಪಗಳಿಗೆ ಯಾವುದೇ ಆಧಾರವಿಲ್ಲ. ಇದು ಬೀಜಿಂಗ್ ವಿರುದ್ಧ ನಡೆಸುತ್ತಿರುವ ಅಪಪ್ರಚಾರದ ಅಭಿಯಾನವೆಂದು ಹೇಳಿದೆ.
ಸೋಮವಾರ ಬೆಳಗ್ಗೆ ಮಾರುಕಟ್ಟೆ ಆರಂಭಕ್ಕೂ ಮುನ್ನ ನಡೆದ ವಹಿವಾಟಿನಲ್ಲಿ 'ಎನ್‌ವಿಡಿಯಾ' ಷೇರುಗಳು ಶೇಕಡ 5% ಕುಸಿದಿವೆ. ಕಳೆದ ಬುಧವಾರದಿಂದ ಶೇಕಡ 11% ಇಳಿಕೆಯಾಗಿದೆ.