×
Ad

London | ಭಾರತೀಯ ಮೂಲದ ಯುವಕನನ್ನು ಇರಿದು ಹತ್ಯೆ

Update: 2026-06-14 11:08 IST
Photo | indiatoday

ಲಂಡನ್: ಪಶ್ಚಿಮ ಲಂಡನ್‌ನ ಸೌತಾಲ್‌ನಲ್ಲಿ ಭಾರತೀಯ ಮೂಲದ 26 ವರ್ಷದ ಯುವಕನನ್ನು ಇರಿದು ಹತ್ಯೆಗೈದಿರುವ ಬಗ್ಗೆ ವರದಿಯಾಗಿದೆ. 

ಹತ್ಯೆಯಾದ ಯುವಕನನ್ನು ಗುರ್ಭೇಜ್ ಸಿಂಗ್ ಎಂದು ಗುರುತಿಸಲಾಗಿದೆ.

ಸೌತಾಲ್‌ನ ಡಾರ್ಮೆರ್ಸ್ ವೆಲ್ ಲೇನ್ ಜಂಕ್ಷನ್ ಬಳಿಯಿರುವ ನಾರ್ತ್ ರೋಡ್ ನಲ್ಲಿ ಗುರ್ಭೇಜ್ ಸಿಂಗ್ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಲಾಗಿದೆ.  ಈ ಘಟನೆಯಲ್ಲಿ 30 ವರ್ಷದ ಮತ್ತೊಬ್ಬ ಯುವಕ ಕೂಡಾ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.  

ಈ ಸಂಬಂಧ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News