ಬಾರಾಮತಿ ವಾಯುನೆಲೆಯಲ್ಲಿ ರನ್‌ವೇಯಿಂದ ಜಾರಿದ ತರಬೇತಿ ವಿಮಾನ |ಪೈಲಟ್ ಸುರಕ್ಷಿತ
ಅಜಿತ್ ಪವಾರ್ ಅವರಿದ್ದ ವಿಮಾನ ಪತನದ 7 ತಿಂಗಳ ಬಳಿಕ ಮತ್ತೊಂದು ಘಟನೆ
Photo | indiatoday
ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ವಾಯುನೆಲೆಯಲ್ಲಿ ಖಾಸಗಿ ಕಂಪೆನಿಯೊಂದು ನಿರ್ವಹಿಸುತ್ತಿದ್ದ ತರಬೇತಿ ವಿಮಾನವು ರವಿವಾರ ರನ್‌ವೇಯಿಂದ ಜಾರಿದ ಘಟನೆ ನಡೆದಿದೆ. ವಿಮಾನಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಪೈಲಟ್ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ.
ರವಿವಾರ ಮಧ್ಯಾಹ್ನ ಸುಮಾರು 12.30ಕ್ಕೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟ ಸುಮಾರು ಏಳು ತಿಂಗಳ ಬಳಿಕ ಬಾರಾಮತಿ ವಾಯುನೆಲೆಯಲ್ಲಿ ನಡೆದ ಮತ್ತೊಂದು ವಿಮಾನ ಸಂಬಂಧಿತ ಘಟನೆ ಇದಾಗಿದೆ.
ತರಬೇತಿ ಕಾರ್ಯಾಚರಣೆ ವೇಳೆ ವಿಮಾನವು ರನ್‌ವೇಯಿಂದ ಹೊರಗೆ ಜಾರಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಧಿಕೃತ ಹೇಳಿಕೆಯ ಪ್ರಕಾರ, ವಿಮಾನವು ಮೊದಲು ‘ಲಿಂಕ್ ಬ್ರಾವೋ’ ಮೂಲಕ ರನ್ ವೇಗೆ ಪ್ರವೇಶಿಸಿತು. ಬಳಿಕ ರನ್ ವೇ 29ರ ಆರಂಭದ ಭಾಗದಲ್ಲಿ ವಿಮಾನವನ್ನು ನಿಲ್ಲಿಸಿ, ಟೇಕ್‌ಆಫ್ ಮಾಡಲು ಪ್ರಯತ್ನಿಸಲಾಯಿತು. ಆದರೆ ಟೇಕ್‌ಆಫ್ ಅನ್ನು ತಿರಸ್ಕರಿಸಲಾಯಿತು.
ನಂತರ ವಿಮಾನವನ್ನು ರನ್‌ವೇ 11ರ ಆರಂಭದಲ್ಲಿ ನಿಲ್ಲಿಸಲಾಯಿತು. ಅಲ್ಲಿಯೂ ಮತ್ತೊಮ್ಮೆ ಟೇಕ್‌ಆಫ್ ಮಾಡಲು ಪ್ರಯತ್ನಿಸಿ, ಅದನ್ನೂ ತಿರಸ್ಕರಿಸಲಾಯಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ತರಬೇತಿ ಕಾರ್ಯಾಚರಣೆಯ ಸಂದರ್ಭದಲ್ಲಿ ವಿಮಾನವು ರನ್‌ವೇಯಿಂದ ಜಾರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಭವಿಸಿಲ್ಲ ಎಂದು ವರದಿಯಾಗಿದೆ.