S I R | 3ನೇ ಹಂತದಲ್ಲಿ 12 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ 1.58 ಕೋಟಿ ಮತದಾರರ ಹೆಸರು ಡಿಲೀಟ್!

Update: 2026-08-09 13:09 IST

ಸಾಂದರ್ಭಿಕ ಚಿತ್ರ | PTI

ಹೊಸ ದಿಲ್ಲಿ: 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜುಲೈನಿಂದ ನಡೆದಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಬಳಿಕ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದ್ದು,1.58 ಕೋಟಿ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು deccanherald ವರದಿ ಮಾಡಿದೆ. 

ಪಂಜಾಬ್ (ಆಗಸ್ಟ್ 13), ತೆಲಂಗಾಣ (ಆಗಸ್ಟ್ 17) ದಿಲ್ಲಿ, ಕರ್ನಾಟಕ ಮತ್ತು ಮಹಾರಾಷ್ಟ್ರ (ಆಗಸ್ಟ್ 24), ನಾಗಾಲ್ಯಾಂಡ್ (ಸೆಪ್ಟೆಂಬರ್ 20) ಹಾಗೂ ತ್ರಿಪುರಾ (ಅಕ್ಟೋಬರ್ 21) ರಾಜ್ಯಗಳ ಕರಡು ಮತದಾರರ ಪಟ್ಟಿಗಳು ಇನ್ನೂ ಬಿಡುಗಡೆಯಾಗಬೇಕಿವೆ.

ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಗೂ ಮುನ್ನ ಆಂಧ್ರಪ್ರದೇಶದಲ್ಲಿ 4.16 ಕೋಟಿ ಮತದಾರರಿದ್ದರು. ಆದರೆ, ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಬಳಿಕ ಈ ಸಂಖ್ಯೆ 3.71 ಕೋಟಿಗೆ ಇಳಿಕೆಯಾಗಿದ್ದು, 44.89 ಲಕ್ಷ (ಶೇ. 10.78) ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.

ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಗೂ ಮುನ್ನ ಜಾರ್ಖಂಡ್ ನಲ್ಲಿ 2.64 ಕೋಟಿ ಮತದಾರರಿದ್ದರು. ಆದರೆ, ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಬಳಿಕ ಈ ಸಂಖ್ಯೆ 2.21 ಕೋಟಿಗೆ ಇಳಿಕೆಯಾಗಿದ್ದು, 43.61 ಲಕ್ಷ (ಶೇ. 16.48) ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.

ಅದೇ ರೀತಿ, ತೀವ್ರ ಮತಪಟ್ಟಿ ಪರಿಷ್ಕರಣೆಗೂ ಮುನ್ನ ಹರ್ಯಾಣ, ಒಡಿಶಾ, ಉತ್ತರಾಖಂಡ, ಮೇಘಾಲಯ, ಅರುಣಾಚಲ ಪ್ರದೇಶ, ಮಣಿಪುರ, ದಾದ್ರಾ ಮತ್ತು ನಗರ್ ಹವೇಲಿ ಹಾಗೂ ಡಾಮನ್ ಮತ್ತು ಡಿಯು, ಚಂಡೀಗಢ, ಮಿಝೋರಾಂ ಹಾಗೂ ಸಿಕ್ಕಿಂನಲ್ಲಿ ಕ್ರಮವಾಗಿ 2.06 ಕೋಟಿ, 3.33 ಕೋಟಿ 79.6 ಲಕ್ಷ, 23.49 ಲಕ್ಷ, 8.87 ಲಕ್ಷ, 20.93 ಲಕ್ಷ, 4.28 ಲಕ್ಷ, 5.16 ಲಕ್ಷ 8.75 ಲಕ್ಷ ಹಾಗೂ 4.71 ಲಕ್ಷ ಮತದಾರರಿದ್ದರು.

ಆದರೆ, ತೀವ್ರ ಮತಪಟ್ಟಿ ಪರಿಷ್ಕರಣೆಯ ಬಳಿಕ ಹರ್ಯಾಣದಲ್ಲಿ 1.72 ಕೋಟಿಗೆ ಇಳಿಕೆಯಾಗಿದ್ದು, 33.83 ಲಕ್ಷ (ಶೇ. 16.38) ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.

ಒಡಿಶಾದಲ್ಲಿ 3.13 ಕೋಟಿಗೆ ಇಳಿಕೆಯಾಗಿದ್ದು, 20.12 ಲಕ್ಷ (ಶೇ. 6.02) ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಉತ್ತರಾಖಂಡದಲ್ಲಿ 71.33 ಲಕ್ಷಕ್ಕೆ ಇಳಿಕೆಯಾಗಿದ್ದು, 8.26 ಲಕ್ಷ (ಶೇ. 10.39) ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಮೇಘಾಲಯದಲ್ಲಿ 21.69 ಲಕ್ಷಕ್ಕೆ ಇಳಿಕೆಯಾಗಿದ್ದು, 1.80 ಲಕ್ಷ (ಶೇ. 7.67) ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.

ಅರುಣಾಚಲ ಪ್ರದೇಶದಲ್ಲಿ 7.18 ಲಕ್ಷಕ್ಕೆ ಇಳಿಕೆಯಾಗಿದ್ದು, 1.69 ಲಕ್ಷ (ಶೇ.19.09) ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಮಣಿಪುರದಲ್ಲಿ 19.34 ಲಕ್ಷಕ್ಕೆ ಇಳಿಕೆಯಾಗಿದ್ದು, 1.58 ಲಕ್ಷ (ಶೇ. 7.5) ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.

ದಾದ್ರಾ ಮತ್ತು ನಗರ್ ಹವೇಲಿ ಹಾಗೂ ದಾಮನ್ ಮತ್ತು ದಿಯುನಲ್ಲಿ 3.01 ಲಕ್ಷಕ್ಕೆ ಇಳಿಕೆಯಾಗಿದ್ದು, 1.26 ಲಕ್ಷ (ಶೇ. 29.64) ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.

ಚಂಡೀಗಢದಲ್ಲಿ 4.50 ಲಕ್ಷಕ್ಕೆ ಇಳಿಕೆಯಾಗಿದ್ದು, 66,181 (ಶೇ. 12.8) ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಮಿಝೋರಾಂನಲ್ಲಿ 8.28 ಲಕ್ಷಕ್ಕೆ ಇಳಿಕೆಯಾಗಿದ್ದು, 46,162 (ಶೇ. 5.2) ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಸಿಕ್ಕಿನಲ್ಲಿ 4.33 ಲಕ್ಷಕ್ಕೆ ಇಳಿಕೆಯಾಗಿದ್ದು, 37.724 (ಶೇ. 8) ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.

ಒಟ್ಟಾರೆಯಾಗಿ, ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಗೂ ಮುನ್ನ 13.77 ಕೋಟಿಯಷ್ಟಿದ್ದ ಮತದಾರರ ಸಂಖ್ಯೆ, ಪರಿಷ್ಕರಣೆಯ ಬಳಿಕ, 12.18 ಕೋಟಿಗೆ ಇಳಿಕೆಯಾಗಿದೆ. ಇದರಿಂದ 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 1.58 ಕೋಟಿ (ಶೇ. 11.51) ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.

ಕರಡು ಮತಪಟ್ಟಿಯಲ್ಲಿ ಸೇರ್ಪಡೆ ಮತ್ತು ಕೈಬಿಡುವುದಕ್ಕೆ ಹಕ್ಕು ಮತ್ತು ಆಕ್ಷೇಪ ಸಲ್ಲಿಸಲು ಹಾಗೂ ಹೊಸ ಮತದಾರರ ನೋಂದಣಿಗೂ ಚುನಾವಣಾ ಆಯೋಗ ಅವಕಾಶ ಕಲ್ಪಿಸಿರುವುದರಿಂದ, ಮತಪಟ್ಟಿಯಲ್ಲಿನ ಮತದಾರರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News