×
Ad

ರಾಷ್ಟ್ರ ರಾಜಧಾನಿಯಲ್ಲಿ ಮತ್ತಷ್ಟು ಹೆಚ್ಚಿದ ಬಿಸಿಲಿನ ಬೇಗೆ: ಗರಿಷ್ಠ ತಾಪಮಾನ ದಾಖಲು

Update: 2026-05-19 07:45 IST

Photo: x.com/htTweets

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಬಿಸಿಲಿನ ಬೇಗೆ ಮತ್ತಷ್ಟು ಹೆಚ್ಚಿದ್ದು, ಸೋಮವಾರ ಪ್ರಸಕ್ತ ಋತುವಿನ ಗರಿಷ್ಠ ಉಷ್ಣಾಂಶ 43.4 ಡಿಗ್ರಿ ಸೆಲ್ಷಿಯಸ್ ಸಫ್ದರ್ಜಂಗ್ ಮಾಪನ ಕೇಂದ್ರದಲ್ಲಿ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಮುಂದಿನ ನಾಲ್ಕು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯಲಿದೆ ಎಂದು ಇಲಾಖೆ ಹೇಳಿದ್ದು, ನಗರದ ವಿವಿಧೆಡೆಗಳಲ್ಲಿ ಉಷ್ಣಮಾರುತಕ್ಕೆ ಸಂಬಂಧಿಸಿದಂತೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಸಫ್ದರ್ಜಂಗ್ ನಲ್ಲಿ ದಾಖಲಾಗಿರುವ ತಾಪಮಾನ ವಾಡಿಕೆ ಉಷ್ಣತೆಗಿಂತ 3 ಡಿಗ್ರಿ ಸೆಲ್ಷಿಯಸ್ ನಷ್ಟು ಅಧಿಕ. ರಿಡ್ಜ್ ಸ್ಟೇಷನ್ ನಲ್ಲಿ ಗರಿಷ್ಠ ತಾಪಮಾನ 44.6 ಡಿಗ್ರಿ ಸೆಲ್ಷಿಯಸ್ ದಾಖಲಾಗಿದ್ದು, ಇದು ವಾಡಿಕೆಗಿಂತ 3.1 ಡಿಗ್ರಿಯಷ್ಟು ಹೆಚ್ಚು. ಅಯ್ಯಾನಗರದಲ್ಲಿ 44.4 ಡಿಗ್ರಿ, ಲೋಧಿ ರಸ್ತೆ ಕೇಂದ್ರದಲ್ಲಿ 43.8 ಡಿಗ್ರಿ ತಾಪಮಾನ ದಾಖಲಾಗಿದೆ. ಪಾಲಂ ನಿಲ್ದಾಣದಲ್ಲಿ 43.5 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ ಎಂದು ಇಎಂಡಿ ಮೂಲಗಳು ಹೇಳಿವೆ.

ಮಂಗಳವಾರ ಮತ್ತು ಬುಧವಾರ ಗರಿಷ್ಠ ತಾಪಮಾನ 43 ಡಿಗ್ರಿಯಿಂದ 45 ಡಿಗ್ರಿ ಸೆಲ್ಷಿಯಸ್ ಇರಲಿದೆ ಹಾಗೂ ಗುರುವಾರ, ಶುಕ್ರವಾರ ಇದು 42 ಡಿಗ್ರಿಯಿಂದ 44 ಡಿಗ್ರಿ ನಡುವೆ ಇರಲಿದೆ ಎಂದು ಇಎಂಡಿ ಅಂದಾಜಿಸಿದೆ. ವಿವಿಧ ಕಡೆಗಳಲ್ಲಿ ಶುಭ್ರ ಆಕಾಶ ಮತ್ತು ಉಷ್ಣಮಾರುತದ ಪರಿಸ್ಥಿತಿ ಇರಲಿದೆ. ಹಗಲಿನ ಅವಧಿಯಲ್ಲಿ ಗಂಟೆಗೆ 35 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News