ಹಿರಿಯ ನಟಿ ಸಾಹುಕಾರ್ ಜಾನಕಿ ನಿಧನ
ಸಾಹುಕಾರ್ ಜಾನಕಿ | Photo Credit : ndtv
ಚೆನ್ನೈ: ಹಿರಿಯ ನಟಿ ಸಾಹುಕಾರ್ ಜಾನಕಿ ಅವರು ಶುಕ್ರವಾರ ಚೆನ್ನೈನಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಅವರು ಮೃತಪಟ್ಟಿದ್ದಾರೆ.
ದಕ್ಷಿಣ ಭಾರತೀಯ ಕಲಾವಿದರ ಸಂಘ (ನಡಿಗರ್ ಸಂಗಮ್)ದ ಅಧ್ಯಕ್ಷ ಹಾಗೂ ನಟ ನಾಸರ್ ಅವರು ಸಾಹುಕಾರ್ ಜಾನಕಿ ಅವರ ನಿಧನವನ್ನು ದೃಢಪಡಿಸಿದ್ದಾರೆ.
‘ಲೆಜೆಂಡರಿ ತಾರೆ ಸಾಹುಕಾರ್ ಜಾನಕಿ (94) ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಶುಕ್ರವಾರ ಸಂಜೆ 5 ಗಂಟೆಯಿಂದ ಟೇಯಂಪೇಟ್‌ನ ಸೆಂಟೋಫ್ ರಸ್ತೆಯಲ್ಲಿ ಇರಿಸಲಾಗುವುದು’ ಎಂದು ನಾಸರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾಹುಕಾರ್ ಜಾನಕಿ ಅವರ ಆರೋಗ್ಯ ಈ ವಾರದ ಆರಂಭದಲ್ಲಿ ಹದಗೆಟ್ಟಿತ್ತು. ಬಳಿಕ ಅವರನ್ನು ಚೆನ್ನೈನ ಅಲ್ವಾರ್‌ಪೇಟೆಯಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದ ಅವರಿಗೆ ತೀವ್ರ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿತ್ತು.
ದಕ್ಷಿಣ ಭಾರತೀಯ ಚಿತ್ರರಂಗದ ಅತ್ಯಂತ ಗೌರವಾನ್ವಿತ ನಟಿಯರಲ್ಲಿ ಒಬ್ಬರಾಗಿದ್ದ ಸಾಹುಕಾರ್ ಜಾನಕಿ ಅವರ ನಿಧನದಿಂದ ಚಿತ್ರರಂಗದಲ್ಲಿ ಶೋಕ ಆವರಿಸಿದೆ.